ಗದಗ: ಗೌರಿ ಲಂಕೇಶ್ ಹಂತಕರ ಪತ್ತೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ
ಪೇಜಾವರ ಶ್ರೀ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ
ಗದಗ, ಡಿ.1: ನಗರದ ಗಾಂಧಿವೃತ್ತದಲಿ್ಲ ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆ ಹಚ್ಚಿ ಬಂಧಿಸಲು ಆಗ್ರಹಿಸಿ ಡಾ.ಎಂ.ಎಂ.ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿಯಿಂದ ಪಂಜಿನ ಮೆರವಣಿಗೆ ಮೂಲಕ ಧರಣಿ ನಡೆಸಲಾಯಿತು.
ಡಾ.ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ಹಂತಕರನ್ನು ಬಂಧಿಸಲು ಆಗ್ರಹಿಸಲಾಯಿತು.
ಗೌರಿ ಹತ್ಯೆಗೈದ ದಿನದಿಂದ ಪ್ರತಿ ತಿಂಗಳು 15 ಮತ್ತು 30ನೆ ದಿನಾಂಕದಂದು ನಿರಂತರವಾಗಿ ಇಲ್ಲಿನ ಪ್ರಗತಿಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ, ಹತ್ಯೆ ಖಂಡಿಸಿ ಈಗಾಗಲೇ ಬೀದಿ ಕವಿಗೋಷ್ಠಿ, ಸಾಕ್ಷಚಿತ್ರ ಪ್ರದರ್ಶನ ಹೀಗೆ ಹಲವಾರು ವಿಧದಲ್ಲಿ ಪ್ರತಿಭಟನೆ ಮುಂದುವರಿದಿದೆ. ‘ನಾನು ಗೌರಿ, ನಾನು ಪನ್ಸಾರೆ, ನಾನು ಕಲಬುರ್ಗಿ, ನಾನು ದಾಭೋಲ್ಕರ್’ ಎನ್ನುವ ಘೋಷಣೆ ಗಳನ್ನು ಕೂಗಿದರು.
ಹತ್ಯಾ ವಿರೋಧಿ ಹೋರಾಟ ಸಮಿತಿಯ ಮುಖಂಡ ಬಸವರಾಜ ಸೂಳಿಬಾವಿ ವಾತನಾಡಿ, ಹತ್ಯೆಕೋರರ ಬಂಧನದಲ್ಲಾಗುತ್ತಿರುವ ಬಗ್ಗೆ ಗದಗನಲ್ಲಿ ಮಾತ್ರ ಪಾಕ್ಷಿಕ ಪ್ರತಿಭಟನೆ ಮಾಡುವ ಮೂಲಕ ಸರಕಾರಗಳ ಗಮನ ಸೆಳೆಯಲಾಗುತ್ತಿದೆ. ಆದರೆ ಇದಕ್ಕೆ ಸರಕಾರಗಳಿಂದ ಸ್ಪಂದನೆ ಸಿಕ್ಕಾಗ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಯುತ್ತದೆ ಎಂದರು.
ಹತ್ಯಾ ವಿರೋಧಿ ಹೋರಾಟ ಸಮಿತಿಯ ಮುಖಂಡ ಬಸವರಾಜ ಸೂಳಿಬಾವಿ ವಾತನಾಡಿ, ಹತ್ಯೆಕೋರರ ಬಂಧನದಲ್ಲಾಗುತ್ತಿರುವ ಬಗ್ಗೆ ಗದಗನಲ್ಲಿ ಮಾತ್ರ ಪಾಕ್ಷಿಕ ಪ್ರತಿಭಟನೆ ಮಾಡುವ ಮೂಲಕ ಸರಕಾರಗಳ ಗಮನ ಸೆಳೆಯಲಾಗುತ್ತಿದೆ. ಆದರೆ ಇದಕ್ಕೆ ಸರಕಾರಗಳಿಂದ ಸ್ಪಂದನೆ ಸಿಕ್ಕಾಗ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಯುತ್ತದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರಕಾರ ಗೌರಿ ಲಂಕೇಶ್ ಹಾಗೂ ಡಾ.ಎಂ.ಎಂ. ಕಲಬುರ್ಗಿ ಹತ್ಯೆಕೋರರನ್ನು ಬಂಧಿಸುವಲ್ಲಿ ತೋರುತ್ತಿರುವ ನಿರಾಸಕ್ತಿ ಬಗ್ಗೆ ತೀರಾ ಬೇಸರ ವ್ಯಕ್ತಪಡಿಸಿದರು.
ಜತೆಗೆ ಪೇಜಾವರ ಶ್ರೀಗಳು ಸಂವಿಧಾನ ತಿದ್ದುಪಡಿ ಯಾಗಬೇಕು ಅನ್ನುವ ವಿವಾದಾತ್ಮಕ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿ, ಹೋರಾಟಗಾರರು ಶ್ರೀಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಂಕರಗೌಡ ಸಾತ್ಮಾರ, ಶರೀಫ್ ಬಿಳೆಯಲಿ, ರಾಜು ಬಿಳೆಯಲಿ, ರಾಮಚಂದ್ರ ಹಂಸನೂರ, ಮುತ್ತು ಹಾಳಕೇರಿ, ಬಿ.ಕೆ. ಪೂಜಾರ ಸೇರಿದಂತೆ ಬಂಡಾಯ ಸಾಹಿತಿಗಳು, ಚಿಂತಕರು, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಹತ್ಯಾ ವಿರೋಧಿ ಹೋರಾಟ ಸಮಿತಿಯಪದಾಧಿಕಾರಿಗಳು ಭಾಗವಹಿಸಿದ್ದರು.
ಪೇಜಾವರ ಶ್ರೀಗಳ ಹೇಳಿಕೆಯ ಹಿಂದೆ ಮೇಲ್ವರ್ಗದ ಹಿತ, ಚುನಾವಣೆ ಸಮೀಪಿಸುತ್ತಿರೋ ಹಿನ್ನೆಲೆ ರಾಜಕೀಯ ಕುತಂತ್ರ ಅಡಗಿದೆ. ಜೊತೆಗೆ ಪೇಜಾವರ ಶ್ರೀಗಳ ಹೇಳಿಕೆ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ. ಇನ್ನು ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಅವರನ್ನು ಹತ್ಯೆಗೈದವರು ಯಾರೆಂದು ಇಲ್ಲಿಯವರೆಗೂ ಸರಕಾರಗಳಿಗೆ ಕಂಡು ಹಿಡಿಯಲು ಆಗುತ್ತಿಲ್ಲ. ಇದೊಂದು ಬೇಸರದ ಸಂಗತಿ.
-ಬಸವರಾಜ್ ಸೂಳಿವಾವಿ, ಚಿಂತಕರು
ಗೌರಿ ಹಾಗೂ ಕಲಬುರ್ಗಿ ಹತ್ಯೆಕೋರರನ್ನು ಹಿಡಿಯುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ್ದು ಸಮಪಾಲಿದೆ. ಆದರೆ ತನಿಖೆ ಮಾ ತ್ರ ಆಮೆಗತಿಯಲ್ಲಿ ನಡೆಯುತ್ತಿರುವುದು ಶೋಚನೀಯ. ಹತ್ಯೆಕೋರರನ್ನು ಬಂಧಿಸುವಲ್ಲಿ ಸರಕಾರಗಳು ಅಧಿ ಕಾರಿಗಳ ಮೇಲೆ ಹೆಚ್ಚು ಒತ್ತಡ ಹಾಕಬೇಕು.
-ಶಂಕರ ಗೌಡ, ಬಂಡಾಯ ಸಾಹಿತಿ







