ಪಕ್ಕಲಡ್ಕ: ಪ್ರಬಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಮಂಗಳೂರು, ಡಿ.2: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಪಕ್ಕಲಡ್ಕ ವರ್ತುಲದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಹಲವು ಧರ್ಮ- ಒಂದು ಭಾರತ’ ಎಂಬ ವಿಷಯದಲ್ಲಿ ಏರ್ಪಡಿಸಲಾಗಿದ್ದ ಪ್ರಬಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮರ್ಹೂಮ್ ಇಬ್ರಾಹೀಂ ಸಈದ್ ಆಡಿಟೋರಿಯಂನಲ್ಲಿ ನಡೆಯಿತು.
ದಾನಿಶ್ ಚೆಂಡಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈಂಟ್ ಜೋಸೆಫ್ ಶಾಲೆಯ ಸುಧೀರ್ ಕುಮಾರ್ ಜೈನ್ ಮತ್ತು ಆದರ್ಶ ಸರಕಾರಿ ಶಾಲೆಯ ವಿ.ಕೆ. ಕೃಷ್ಣ , ಸ್ನೇಹ ಪಬ್ಲಿಕ್ ಶಾಲೆಯ ಜುವೈರಿಯಾ ಸಂಹ, ಹ್ಯೂಮನ್ ವೆಲೆಫೇರ್ ಟ್ರಷ್ಟ್‌ನ ಅಧ್ಯಕ್ಷ ಯುಸುಫ್ ಪಕ್ಕಲಡ್ಕ ಮಾತನಾಡಿದರು.
ಎಸ್‌ಐಒ ಪಕ್ಕಲಡ್ಕ ವರ್ತುಲದ ಅಧ್ಯಕ್ಷ ಮುಹಮ್ಮದ್ ಝುಹೀರ್ ಅಧ್ಯಕ್ಷತೆ ವಹಿಸಿದ್ದರು. ಸೈಂಟ್ ಜೋಸೆಫ್ ಶಾಲೆಯ ಲಿಖಿತಾ ಪ್ರಥಮ, ಆದರ್ಶ ಸರಕಾರಿ ಶಾಲೆಯ ರಾಹಿಲಾ ದ್ವಿತೀಯ, ಸ್ನೇಹ ಪಬ್ಲಿಕ್ ಶಾಲೆಯ ಹಮ್ನಾ ತೃತೀಯ ಬಹುಮಾನ ಗಳಿಸಿದರು. ಸದೀದ್ ಕಿರಾಅತ್ ಪಠಿಸಿದರು. ರಾಇದ್ ಸ್ವಾಗತಿಸಿದರು. ಅಶೀರುದ್ದೀನ್ ಆಲಿಯಾ ಕಾರ್ಯಕ್ರಮ ನಿರೂಪಿಸಿದರು
Next Story





