ವಕೀಲ ವೃತ್ತಿಯಲ್ಲಿ ನೈತಿಕತೆ ಮುಖ್ಯ: ನ್ಯಾ.ದಿನೇಶ್ ಕುಮಾರ್

ಉಡುಪಿ, ಡಿ.2: ವಕೀಲರು ತಮ್ಮ ವೃತ್ತಿಯಲ್ಲಿ ನೈತಿಕತೆಗೆ ಹೆಚ್ಚಿನ ಪ್ರಾಮು ಖ್ಯತೆ ನೀಡಬೇಕು. ಇದರಿಂದ ಸಮಾಜದ ಎಲ್ಲ ವರ್ಗಗಳಲ್ಲಿ ಸೌಹಾರ್ದತೆಯ ವಾತಾವರಣ ಮತ್ತು ಸಂವಿಧಾನಾತ್ಮಕವಾಗಿ ಸಿಗುವ ಎಲ್ಲ ಹಕ್ಕುಗಳನ್ನು ಒದಗಿ ಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಶನಿವಾರ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಕೀಲರು ಇಂದು ನ್ಯಾಯಾಂಗ, ಆಡಳಿತಾತ್ಮಕ ಹಾಗೂ ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕಾಗಿದೆ. ಈ ಸಮಾಜದಲ್ಲಿ ವಕೀಲರಿಲ್ಲದಿದ್ದರೆ ಜನರಿಗೆ ಅವರ ಸಂವಿಧಾನ್ಮತಕ ಹಕ್ಕುಗಳು ಸಿಗುತ್ತಿರಲಿಲ್ಲ ಮತ್ತು ನ್ಯಾಯ ಮರಿಚೀಕೆಯಾಗುತ್ತಿತ್ತು. ಇದರಿಂದ ಇಡೀ ಪ್ರಜಾಪ್ರಭುತ್ವ ಡೋಲಾಯಮಾನ ವಾಗುತ್ತಿತ್ತು. ನ್ಯಾಯವಾದಿ ಮತ್ತು ನ್ಯಾಯ ಪಾಲಿಕೆಯ ಸಂಬಂಧ ಅತ್ಯಂತ ಪ್ರಾಮುಖ್ಯವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಕ್, ಕುಂದಾಪುರದ ಹಿರಿಯ ವಕೀಲ ಎ.ಎನ್.ಎಸ್.ಹೆಬ್ಬಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕೆ.ರವಿರಾಜ್ ಹೆಗ್ಡೆ, ಯಶಸ್ವಿನಿ ಬಿ.ಅಮೀನ್, ಮಂಜು ನಾಥ್ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ಆತ್ರಾಡಿ ಪೃಥ್ವಿ ರಾಜ್ ಹೆಗ್ಡೆ ಸ್ವಾಗತಿಸಿದರು. ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ವಂದಿಸಿದರು. ಬಳಿಕ ನ್ಯಾಯವಾದಿಗಳಿಂದ ಮಹಿಷಾ ಸುರ ಮರ್ದಿನಿ ಯಕ್ಷಗಾನ ಪ್ರದರ್ಶನ ನಡೆಯಿತು.







