ಡಿ.3: ಪೂರ್ವಿಕಾ ಮೊಬೈಲ್ಸ್‌ನಿಂದ ಮಂಗಳೂರಿನಲ್ಲಿ 2 ಹೊಸ ಶಾಖೆ ಉದ್ಘಾಟನೆ

► ಗ್ರಾಹಕರು ಉದ್ಘಾಟನಾ ಆಫರ್‌ಗಳನ್ನು ಎರಡೂ ಶಾಖೆಗಳಲ್ಲಿ ಪಡೆದುಕೊಳ್ಳಬಹುದು
► ಮೊಬೈಲ್ ಕ್ಷಮತೆ ಬಗ್ಗೆ ಲೈವ್ ಡೆಮೊ ಸೌಲಭ್ಯ ಸ್ಪಷ್ಟವಾದ ಚಿತ್ರಣ ನೀಡುತ್ತದೆ.
ಮಂಗಳೂರು, ಡಿ. 2: ಭಾರತದ ಅಗ್ರಗಣ್ಯ ಮೊಬೈಲ್ ಚಿಲ್ಲರೆ ಮಾರಾಟ ಸಂಸ್ಥೆಯಾದ ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಡಿ.3ರಂದು ಮಂಗಳೂರಿನಲ್ಲಿ ಎರಡು ಹೊಸ ಶಾಖೆಗಳನ್ನು ತೆರೆಯಲಿದೆ.
ಪೂರ್ವಿಕಾ ಮೊಬೈಲ್ಸ್ ಅನ್ನು ಗ್ರಾಹಕರಿಗೆ ಎಲ್ಲ ಮೊಬೈಲ್ ಹಾಗೂ ಗ್ಯಾಡ್ಜೆಟ್ ಅಗತ್ಯತೆಗಳಿಗೆ ಒಂದೇ ಸೂರಿನಡಿ ಸೌಲಭ್ಯ ಸಿಗುವ ಕೇಂದ್ರ ಎಂದು ಗುರುತಿಸಲಾಗುತ್ತದೆ. ಹೊಸದಾಗಿ ಉದ್ಘಾಟನೆಯಾದ ಮತ್ತು ಟ್ರೆಂಡಿಂಗ್ ಗ್ಯಾಡ್ಜೆಟ್‌ಗಳು ಪೂರ್ವಿಕಾ ಮಳಿಗೆಯಲ್ಲಿ ಸ್ಥಾನ ಪಡೆಯುತ್ತವೆ.
ತಮಿಳುನಾಡು, ಪುದುಚೇರಿ ಹಾಗೂ ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿದ್ದು, ಗರಿಷ್ಠ ಸಂಖ್ಯೆಯ ಜನರನ್ನು ತಲುಪುವ ನಿಟ್ಟಿನಲ್ಲಿ ತನ್ನ ಮಳಿಗೆಯನ್ನು ವಿಸ್ತರಿಸಲು ಆದ್ಯತೆ ನೀಡಿದೆ. ಕರ್ನಾಟಕದ ಉದ್ದಗಲಕ್ಕೂ 30ಕ್ಕೂ ಹೆಚ್ಚು ಮಳಿಗೆಗಳಿದ್ದು, ಈಗಾಗಲೇ ಜನರ ವಿಶ್ವಾಸವನ್ನು ಗಳಿಸಿವೆ. ಮಂಗಳೂರಿನಲ್ಲಿ ಯಶಸ್ವಿಯಾಗಿ ಬೇರೂರಿರುವ ಈ ಸರಣಿಗೆ ಇದೀಗ ಎರಡು ಕಡೆ ಹೊಸ ಶಾಖೆಗಳು ಸೇರ್ಪಡೆಯಾಗಲಿವೆ.
ಎರಡು ಶಾಖೆಗಳ ಪೈಕಿ ಒಂದು ಸಿಟಿ ಸೆಂಟರ್ ಮಾಲ್‌ನ ಸಂಖ್ಯೆ 14/ ಬಿ2, ಮೊದಲ ಮಹಡಿ, ಕೆ.ಎಸ್.ಆರ್‌ರಸ್ತೆ, ಹಂಪನಕಟ್ಟೆ, ಮಂಗಳೂರು- 575001 ಹಾಗೂ ಇನ್ನೊಂದು ಬೆಂದೂರ್‌ವೆಲ್: ನಂ. 15-20-1227/20, 21, 22, ಎಸ್ಸೆಲ್‌ವೆಲ್‌ಕಾನ್, ಬೆಂದೂರ್‌ವೆಲ್ ಸರ್ಕಲ್ ಕಂಕನಾಡಿ, ಮಂಗಳೂರು- 575002 (ರಾಧಾ ಮೆಡಿಕಲ್ಸ್‌ನ ಪಕ್ಕ) ಇವೆ.
ಉದ್ಘಾಟನಾ ಆಫರ್ ಆಗಿ ಪೂರ್ವಿಕಾ ಮೊಬೈಲ್ಸ್ ಗ್ರಾಹಕರಿಗೆ ಅದ್ಭುತ ಕೊಡುಗೆಗಳನ್ನು ಘೋಷಿಸಿದೆ. ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇಕಡ 35ರವರೆಗೂ ರಿಯಾಯ್ತಿ ಇದ್ದು, ಶೂನ್ಯ ಡೌನ್‌ಪೇಮೆಂಟ್ ಆಫರ್‌ನಲ್ಲೂ ಆಯ್ದ ಮೊಬೈಲ್ ಖರೀದಿಸಲು ಅವಕಾಶವಿದೆ. ಗ್ರಾಹಕರು ಇದರ ಜತೆಗೆ ವಿಶೇಷ ಉಚಿತ ಉಡುಗೊರೆಗಳನ್ನು ಮತ್ತು ಅದ್ಭುತ ಕೊಡುಗೆಗಳನ್ನು ಎರಡೂ ಹೊಸ ಶಾಖೆಗಳಲ್ಲಿ ಪ್ರತಿ ಖರೀದಿಯ ಮೇಲೆ ಪಡೆಯಲಿದ್ದಾರೆ.
ಈ ಹೊಸ ಮಳಿಗೆಗಳಲ್ಲಿ 40ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳು ಇದ್ದು, ಲೈವ್ ಡೆಮೊ ಸೌಲಭ್ಯವೂ ಇದೆ. ಮೊಬೈಲ್ ಫೋನ್‌ಗಳಲ್ಲದೇ, ಟ್ಯಾಬ್ಲೆಟ್‌ಗಳು ಹಾಗೂ ಇತರ ಪೂರಕ ಸಾಧನಗಳು ಕೂಡಾ ಮಾರಾಟಕ್ಕಿವೆ. ಮೊಬೈಲ್ ಸರ್ವೀಸ್ ಕೂಡಾ ಪೂರ್ವಿಕಾ ಮೊಬೈಲ್ಸ್ ಮಳಿಗೆಯಲ್ಲಿ ಲಭ್ಯ. ಅಧಿಕ ಬೇಡಿಕೆಯ ಆನ್‌ಲೈನ್ ಮೊಬೈಲ್ ಬ್ರಾಂಡ್‌ಗಳು ಕೂಡಾ ಪೂರ್ವಿಕಾ ಮೊಬೈಲ್ಸ್‌ನಲ್ಲಿ ಲಭ್ಯ.
ಪೂರ್ವಿಕಾ ಮೊಬೈಲ್ಸ್‌ನಲ್ಲಿ ಕ್ಯಾಮೆರಾ ಮೊಬೈಲ್‌ಗಳು ಕೇವಲ 599 ರೂಪಾಯಿಯಿಂದ ಆರಂಭವಾಗುತ್ತವೆ ಹಾಗೂ 4ಜಿ ಮೊಬೈಲ್‌ಗಳು 2,849 ರೂಪಾಯಿಂದ ಆರಂಭವಾಗುತ್ತವೆ. ಇದು ಗ್ರಾಹಕರಿಗೆ ಮೊಬೈಲ್ ಮಾಲಕರಾಗಲು ಅದ್ಭುತ ಆರಂಭಿಕ ಬೆಲೆಗಳಾಗಿವೆ.
ಪೂರ್ವಿಕಾ ಮೊಬೈಲ್ಸ್ ಇತ್ತೀಚೆಗೆ ಸಹ ಬ್ರಾಂಡೆಡ್ ಇಎಂಐ ಕಾರ್ಡ್ ಅನ್ನು ಬಜಾಜ್ ಫೈನಾನ್ಸ್ ಜತೆಗೆ ಬಿಡುಗಡೆ ಮಾಡಿದ್ದು, ಭಾರತದ ಯಾವುದೇ ಮೊಬೈಲ್ ಚಿಲ್ಲರೆ ಮಳಿಗೆಗಳಲ್ಲಿ ಈ ಸೌಲಭ್ಯ ಇದೇ ಮೊದಲಾಗಿದೆ. ಹೊಸ ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಇಎಂಐ ಸೌಲಭ್ಯವೂ ಇದೆ. ಪೂರ್ವಿಕಾ ಮೊಬೈಲ್ ಹೊಸ ಬ್ರಾಂಡ್ ಲೋಗೊವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಕಾಜಲ್ ಅಗರ್‌ವಾಲ್ ಅವರನ್ನು ಪ್ರಚಾರ ರಾಯಭಾರಿಯಾಗಿ ಘೋಷಿಸಿದೆ.
ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್.ಯುವರಾಜ್, "ಕರ್ನಾಟಕದಲ್ಲಿ ನಮ್ಮ ಶಾಖೆಗಳನ್ನು ವಿಸ್ತರಿಸಲು ಆನಂದವಾಗುತ್ತಿದೆ. ಇದರ ಮೂಲಕ ನಮ್ಮ ಪ್ರಬಲ ಜಾಲದ ನೆಲೆಯನ್ನು ದೇಶಾದ್ಯಂತ ಭದ್ರಗೊಳಿಸುತ್ತಿದ್ದೇವೆ. ವಿಶಿಷ್ಟ ಹಾಗೂ ಆರಾಮದಾಯಕ ಅನುಭವವನ್ನು ನಮ್ಮ ಗ್ರಾಹಕರಿಗೆ ಹೈಟೆಕ್ ಮೂಲ ಸೌಕರ್ಯ ಹಾಗೂ ಗ್ರಾಹಕ ಸ್ನೇಹಿ ಮನೋಭಾವದ ಮೂಲಕ ಸಾಧ್ಯವಾದ ಎಲ್ಲ ರೀತಿಯಲ್ಲಿ ಒದಗಿಸುತ್ತೇವೆ" ಎಂದು ಹೇಳಿದರು.
ಪೂರ್ವಿಕಾ ಗ್ರಾಹಕರ ಅಗತ್ಯತೆಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದು, ತಮಿಳುನಾಡು, ಪುದುಚೇರಿ ಹಾಗೂ ಕರ್ನಾಟಕದಲ್ಲಿ ನೂರಾರು ಮೊಬೈಲ್ ಮಳಿಗೆಗಳೊಂದಿಗೆ ಸುಮಾರು 2 ಕೋಟಿ ಗ್ರಾಹಕರನ್ನು ಹೊಂದಿದೆ. ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ತನ್ನ ಅಸ್ತಿತ್ವ ಇರುವ ಎಲ್ಲ ಸ್ಥಳಗಳಲ್ಲಿ ಗ್ರಾಹಕರಿಗೆ ವಿಶ್ವದರ್ಜೆಯ ಅತ್ಯಾಧುನಿಕ ಹಾಗೂ ಅತ್ಯುನ್ನತ ಮೊಬೈಲ್ ತಂತ್ರಜ್ಞಾನವನ್ನು ಖಾತ್ರಿಪಡಿಸಿದೆ.
ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ
ಮೊಬೈಲ್ ಮಳಿಗೆಗಳಲ್ಲಿ ನೋಡುವ, ಸ್ಪರ್ಶಿಸುವ ಮತ್ತು ಅನುಭವಿಸುವ, ಆಯ್ಕೆಯ ಅನುಕೂಲತೆಯ ಅತ್ಯಾಧುನಿಕ ಚಿಲ್ಲರೆ ಮಳಿಗೆ ಸ್ಥಾಪಿಸಬೇಕು ಎಂಬ ಯೋಚನೆಯಿಂದ ಮೊಟ್ಟಮೊದಲ ಪೂರ್ವಿಕಾ ಷೋರೂಂ 2004ರಲ್ಲಿ ಚೆನ್ನೈನ ಕೊಡಂಬಾಕ್ಕಂನಲ್ಲಿ ಆರಂಭವಾಯಿತು.
ಪೂರ್ವಿಕಾ ಮೊಬೈಲ್ಸ್ ಒಟ್ಟು 258 ಮಳಿಗೆಗಳನ್ನು ತಮಿಳುನಾಡು, ಪುದುಚೇರಿ ಹಾಗೂ ಕರ್ನಾಟಕದ 65 ನಗರಗಳಲ್ಲಿ ಹೊಂದಿದೆ. ಬಹು ಬ್ರಾಂಡ್‌ಗಳ ಶೋರೂಂ ಆಗಿರುವ ಈ ಮಳಿಗೆ ಮೊಬೈಲ್ ಫೋನ್, ಬಿಡಿಭಾಗಗಳು, ಮೊಬೈಲ್ ರೀಚಾರ್ಜ್ ಮತ್ತು ಉಪಗ್ರಹ ಟೆಲಿವಿಷನ್ ಸಂಪರ್ಕಗಳನ್ನು ಮಾರಾಟ ಮಾಡುತ್ತದೆ. ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಎಲ್ಲ ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್ಸಂಗ್, ಆ್ಯಪಲ್, ನೋಕಿಯಾ, ಸೋನಿ, ಎಚ್‌ಟಿಸಿ, ಮೋಟರೋಲಾ, ಎಲ್‌ಜಿ, ಜಿಯೋನೀ, ಮೈಕ್ರೋಮ್ಯಾಕ್ಸ್, ಕಾರ್ಬನ್, ಸೆಲ್ಕೋನ್, ರೆಡ್‌ಮಿ, ಟೆಕ್ನೋ, ಇಂಟೆಲ್, ಇಂಟೆಕ್ಸ್, ಒಪ್ಪೊ, ವಿವೊ, ಗೂಗಲ್, ಲಾವಾ ಮತ್ತು ಹವಾಯಿ ಮತ್ತಿತರ ಬ್ರಾಂಡ್‌ಗಳನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ www.poorvikamobile.com,








