ಉ. ಕೊರಿಯ ಪರಮಾಣು ಪರೀಕ್ಷೆ ಸ್ಥಳದ ಸಮೀಪ ಭೂಕಂಪ

ಸಿಯೋಲ್ (ದಕ್ಷಿಣ ಕೊರಿಯ), ಡಿ. 2: ಉತ್ತರ ಕೊರಿಯದ ಪರಮಾಣು ಪರೀಕ್ಷೆ ಸ್ಥಳದ ಸಮೀಪ ರಿಕ್ಟರ್ ಮಾಪಕದಲ್ಲಿ 2.5ರ ತೀವ್ರತೆ ಹೊಂದಿರುವ ಪ್ರಾಕೃತಿಕ ಭೂಕಂಪ ಸಂಭವಿಸಿದೆ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ಹೇಳಿದ್ದಾರೆ. ಇದು ಇತ್ತೀಚೆಗೆ ಅಲ್ಲಿ ಪರಮಾಣು ಸ್ಫೋಟ ಸಂಭವಿಸಿದ ಬಳಿಕ ನಡೆದ ನಾಲ್ಕನೆ ಭೂಕಂಪವಾಗಿದೆ.
ಉತ್ತರ ಕೊರಿಯದ ಈಶಾನ್ಯ ರಾಜ್ಯ ನಾರ್ತ್ ಹಮ್‌ಗ್‌ಯಾಂಗ್‌ನಲ್ಲಿರುವ ಪಂಗ್ಯೆರಿ ಪರಮಾಣು ಪರೀಕ್ಷಾ ಸ್ಥಳದಿಂದ ಸುಮಾರು 2.7 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಕೊರಿಯ ಹವಾಮಾನ ಸಂಸ್ಥೆ ತಿಳಿಸಿದೆ.
‘‘ಈ ಭೂಕಂಪವು ಪ್ರಾಕೃತಿಕ ಭೂಕಂಪವಾಗಿದೆ ಹಾಗೂ ಅಲ್ಲಿ ನಡೆದ ಆರನೆ ಪರಮಾಣು ಪರೀಕ್ಷೆಯ ಪರಿಣಾಮವಾಗಿ ಭೂಕಂಪ ಸಂಭವಿಸಿದೆ ಎಂಬುದಾಗಿ ಭಾವಿಸಲಾಗಿದೆ’’ ಎಂದಿದೆ.
Next Story





