ಲಂಡನ್ ಮೇಯರ್ ಸಾದಿಕ್ ಖಾನ್ ಡಿ.3ರಂದು ಮುಂಬೈಗೆ

ಲಂಡನ್, ಡಿ. 2: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ (ಬ್ರೆಕ್ಸಿಟ್) ಬಳಿಕ ಬ್ರಿಟನ್ ರಾಜಧಾನಿಯ ಸನ್ನದ್ಧತೆ ಮತ್ತು ಶಕ್ತಿಯನ್ನು ಪ್ರಚುರಗೊಳಿಸುವ ಉದ್ದೇಶದಿಂದ ಲಂಡನ್ ಮೇಯರ್ ಸಾದಿಕ್ ಖಾನ್ ಡಿ.3ರಂದು ಮುಂಬೈಗೆ ಆಗಮಿಸಲಿದ್ದಾರೆ.
ತನ್ನ ಆರು ದಿನಗಳ ಪ್ರವಾಸದ ಅವಧಿಯಲ್ಲಿ ಅವರು ದಿಲ್ಲಿ ಮತ್ತು ಅಮೃತಸರಕ್ಕೂ ಭೇಟಿ ನೀಡಲಿದ್ದಾರೆ. ಬಳಿಕ, ಅವರು ಲಾಹೋರ್, ಇಸ್ಲಾಮಾಬಾದ್ ಮತ್ತು ಕರಾಚಿಗಳಿಗೆ ಭೇಟಿ ನೀಡುವುದಕ್ಕಾಗಿ ಪಾಕಿಸ್ತಾನಕ್ಕೆ ಹೋಗಲಿದ್ದಾರೆ.
ತನ್ನ ಆರು ದಿನಗಳ ಪ್ರವಾಸದ ಅವಧಿಯಲ್ಲಿ ಅವರು ಆರು ನಗರಗಳನ್ನು ಸಂದರ್ಶಿಸುತ್ತಾರೆ.
ಭಾರತ ಮತ್ತು ಲಂಡನ್ ನಡುವಿನ ವ್ಯಾಪಾರಿ ಸಂಬಂಧವನ್ನು ವೃದ್ಧಿಸುವ ದೃಷ್ಟಿಯಿಂದ ಅವರು ಹಿರಿಯ ರಾಜಕಾರಣಿಗಳು, ವ್ಯಾಪಾರಿ ದಿಗ್ಗಜರು, ಪ್ರಾದೇಶಿಕ ನಾಯಕರು ಮತ್ತು ಬಾಲಿವುಡ್ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ.
Next Story





