ಇಸ್ರೇಲ್ ಕ್ಷಿಪಣಿಗಳನ್ನು ತುಂಡರಿಸಿದ ಸಿರಿಯ: ಸರಕಾರಿ ಮಾಧ್ಯಮ ವರದಿ

ಡಮಾಸ್ಕಸ್ (ಸಿರಿಯ), ಡಿ. 2: ಸಿರಿಯದ ಡಮಾಸ್ಕಸ್ ಪ್ರಾಂತದಲ್ಲಿರುವ ಸರಕಾರಿ ಸೇನಾ ನೆಲೆಯೊಂದನ್ನು ಗುರಿಯಾಗಿಸಿ ಶನಿವಾರ ಮುಂಜಾನೆ ಇಸ್ರೇಲ್ ಹಾರಿಸಿದ ಕನಿಷ್ಠ ಎರಡು ಕ್ಷಿಪಣಿಗಳನ್ನು ಸಿರಿಯದ ವಾಯು ರಕ್ಷಣಾ ವ್ಯವಸ್ಥೆ ತುಂಡರಿಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಆದಾಗ್ಯೂ, ದಾಳಿಯಿಂದ ಹಾನಿ ಸಂಭವಿಸಿದೆ ಎಂದಿದೆ.
‘‘ಮಧ್ಯ ರಾತ್ರಿ 12.30ರ ವೇಳೆಗೆ ಡಮಾಸ್ಕಸ್ ಪ್ರಾಂತದಲ್ಲಿರುವ ಸೇನಾ ನೆಲೆಯೊಂದನ್ನು ಗುರಿಯಾಗಿಸಿ ಇಸ್ರೇಲ್ ಹಲವಾರು ಕ್ಷಿಪಣಿಗಳನ್ನು ಉಡಾಯಿಸಿತು’’ ಎಂದು ‘ಸನಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘‘ಕ್ಷಿಪಣಿಗಳನ್ನು ಎದುರಿಸುವಲ್ಲಿ ಸಿರಿಯದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಯಿತು. ಎರಡು ಕ್ಷಿಪಣಿಗಳನ್ನು ಅದು ತುಂಡರಿಸಿತು. ಆದಾಗ್ಯೂ, ಈ ದಾಳಿಯಿಂದಾಗಿ ಸೊತ್ತು ನಾಶ ಸಂಭವಿಸಿದೆ’’ ಎಂದು ಅದು ತಿಳಿಸಿದೆ.
Next Story





