ಮೊಗಾದಿಶು ಭಯೋತ್ಪಾದಕ ದಾಳಿ: ಮೃತರ ಸಂಖ್ಯೆ 512ಕ್ಕೆ

ಮೊಗಾದಿಶು (ಸೊಮಾಲಿಯ), ಡಿ. 2: ಸೊಮಾಲಿಯ ರಾಜಧಾನಿ ಮೊಗಾದಿಶುವಿನಲ್ಲಿ ಅಕ್ಟೋಬರ್‌ನಲ್ಲಿ ಸಂಭವಿಸಿದ ಟ್ರಕ್ ಬಾಂಬ್ ದಾಳಿಯಲ್ಲಿ ಒಟ್ಟು 512 ಮಂದಿ ಮೃತಪಟ್ಟಿದ್ದಾರೆ ಎಂದು ಈ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ತುರ್ತು ಸಮಿತಿಯೊಂದು ಲೆಕ್ಕ ಹಾಕಿದೆ.
ಅಕ್ಟೋಬರ್ 14ರಂದು ನಡೆದ ದಾಳಿಯಲ್ಲಿ 358 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಈವರೆಗೆ ಹೇಳಲಾಗಿತ್ತು. ಇದು ಸೊಮಾಲಿಯದ ಇತಿಹಾಸದಲ್ಲೇ ಭೀಕರ ಭಯೋತ್ಪಾದಕ ದಾಳಿಯಾಗಿದೆ.
ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತಿಲ್ಲ. ಆದರೆ, ಅಲ್-ಖಾಯಿದ ಜೊತೆ ನಂಟು ಹೊಂದಿರುವ ಶಬಾಬ್ ಭಯೋತ್ಪಾದಕ ಗುಂಪು ಈ ದಾಳಿ ನಡೆಸಿರಬಹುದು ಎಂದು ಭಾವಿಸಲಾಗಿದೆ.
Next Story





