ಮೀಲಾದುನ್ನಬಿ: ನುಸ್ರತುಲ್ ಮಸಾಕೀನ್ ವತಿಯಿಂದ ಹಣ್ಣು ಹಂಪಲು ವಿತರಣೆ

ಕುಂದಾಪುರ, ಡಿ.2: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ.)ರ ಜನ್ಮದಿನಾಚರಣೆ ಅಂಗವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಹಾಗೂ ಮಧ್ಯಾಹ್ನದ ಊಟವನ್ನು ನೀಡಲಾಯಿತು.
ಇದರ ಪ್ರಯುಕ್ತ ನಡೆದ ಸೌಹಾರ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಚಂದ್ರಶೇಖರ್ ಭಾಗವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸಿಸಿದರು. ಸಭೆಯಲ್ಲಿ ಉದ್ಯಮಿಗಳಾದ ಎ.ಕೆ.ಯೂಸುಫ್, ಬಿಎಸ್‌ಎಫ್ ರಫೀಕ್, ಶೇಖ್ ಅಬೂ ಮುಹಮ್ಮದ್, ಎ.ಎಚ್.ಶಾಬಾನ್ ಉಪಸ್ಥಿತರಿದ್ದರು.
ಹಂಗಳೂರು ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಕ್ ಸಖಾಫಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಸ್ಥೆಯ ಅಧ್ಯಕ್ಷ ಜಿ.ಸರ್ದಾರ್, ಉಪಾಧ್ಯಕ್ಷ ಕುಂಞಿಮೋನು ಕಾರ್ಯದರ್ಶಿ ಅಲ್ತಾಫ್ ಕುರೈಶಿ, ಸದಸ್ಯರಾದ ಮನ್ಸೂರ್, ಇಬ್ರಾಹೀಂ ಹೊಸನಗರ, ರಿಯಾಝ್, ಕ್ಲಾಸಿಕ್ ಅಬ್ದುಲ್ಲಾ, ಮುಹಮ್ಮದ್ ಎಚ್.ಬಿ., ಗಡಿ ಮಹಮೂದ್, ಗೋಪಾಡಿ ಸೂಫಿ, ಅಬ್ದುರ್ರಝಾಕ್ ಹಾಜರಿದ್ದರು. ಅಬೂ ಶೇಖ್ ಕಾರ್ಯಕ್ರಮ ನಿರೂಪಿಸಿದರು.
Next Story





