ಟಿಟಿವಿ ದಿನಕರನ್,ಮಧುಸೂದನನ್ ತಮ್ಮ ಪತ್ನಿಯರಿಗಿಂತ ಬಡವರು...!
ಚೆನ್ನೈನ ಆರ್.ಕೆ.ನಗರ ಉಪಚುನಾವಣೆ

ಚೆನ್ನೈ, ಡಿ. 2: ಡಿ21ರಂದು ನಡೆಯಲಿರುವ,ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧಾನದಿಂದ ತೆರವಾಗಿರುವ ಚೆನ್ನೈನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಎಐಎಡಿಎಂಕೆಯ ಇ.ಮಧುಸೂದನನ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿರುವ ಉಪೇಕ್ಷಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ದೇಶದ ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿಲ್ಲ. ನಾಮತ್ರಗಳೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರ ಗಳಂತೆ ಇವರಿಬ್ಬರಿಗಿಂತ ಪತ್ನಿಯರೇ ಹೆಚ್ಚು ಶ್ರೀಮಂತರಾಗಿದ್ದಾರೆ.
ದಿನಕರನ್ ಮತ್ತು ಅವರ ಕುಟುಂಬ ಸದಸ್ಯರು 11,19,62,430 ರೂ.ಗಳ ಚರ ಮತ್ತು ಸ್ಥಿರಾಸ್ತಿಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ ದಿನಕರನ್ ಅವರ ಸಂಪತ್ತು 74.17 ಲ.ರೂ.ಗಳಾಗಿದ್ದರೆ ಅವರ ಪತ್ನಿ 9,27,93,211 ರೂ.ವೌಲ್ಯದ ಸಂಪತ್ತಿನ ಒಡತಿಯಾಗಿದ್ದಾರೆ. ದಿನಕರನ್ ತನ್ನ ಅವಲಂಬಿತರ ಹೆಸರಿನಲ್ಲಿ 1,17,41,411ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಕುಟುಂಬವು 5,55,12,882 ಕೋ.ರೂ.ಗಳ ಸಾಲವನ್ನು ಹೊಂದಿದೆ.
ಮಧುಸೂದನನ್ ಕುಟುಂಬವು 5,18,75,113 ರೂ.ವೌಲ್ಯದ ಆಸ್ತಿಯನ್ನು ಘೋಷಿಸಿದೆ. ಈ ಪೈಕಿ ಮಧುಸೂದನನ್ 1,49,53,941 ರೂ.ಸಂಪತ್ತು ಹೊಂದಿದ್ದರೆ, ಅವರ ಪತ್ನಿ 3,69,21,172 ರೂ.ಗಳ ಸಂಪತ್ತು ಹೊಂದಿದ್ದಾರೆ.
ಡಿಎಂಕೆ ಅಭ್ಯರ್ಥಿ ಎನ್.ಎಂ.ಗಣೇಶ ಮತ್ತು ಅವರ ಕುಟುಂಬ 19,66,192 ರೂ.ಗಳ ಆಸ್ತಿಯನ್ನು ಘೋಷಿಸಿದೆ. ಈ ಪೈಕಿ 12,57,845 ರೂ.ಗಳ ಆಸ್ತಿ ಗಣೇಶ ಹೆಸರಿನಲ್ಲಿದೆ.







