100ನೇ ವಿಕೆಟ್ ಪಡೆದ ಪೆರೆರಾ

ಹೊಸದಿಲ್ಲಿ, ಡಿ.2: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಶ್ರೀಲಂಕಾದ ಆಫ್- ಸ್ಪಿನ್ನರ್ ದಿಲ್ರುವಾನ್ ಪೆರೆರಾ 100ನೇ ವಿಕೆಟ್ ಪಡೆಯುವ ಮೂಲಕ ಲಂಕಾದ ದಂತಕತೆ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಮುರಳೀಧರನ್ 25 ಟೆಸ್ಟ್‌ಗಳಲ್ಲಿ 95 ವಿಕೆಟ್ ಪಡೆದಿದ್ದರು. ಆದರೆ ಪೆರೆರಾ ಅವರು 25 ಟೆಸ್ಟ್‌ಗಳಲ್ಲಿ 100 ವಿಕೆಟ್ ಪಡೆದಿದ್ದಾರೆ.
35ರ ಹರೆಯದ ಪೆರೆರಾ ಅವರು ಶಿಖರ್ ಧವನ್ ವಿಕೆಟ್ ಪಡೆಯುವ ಮೂಲಕ 100 ವಿಕೆಟ್‌ಗಳ ಮೈಲುಗಲ್ಲನ್ನು ತಲುಪಿದರು.
Next Story





