ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನ, ಮೊಬೈಲ್, ಹಣ ಕಸಿದು ಪರಾರಿಯಾದ ದರೋಡೆಕೋರರು
ಬೆಂಗಳೂರು, ಡಿ.2: ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದರೋಡೆಕೋರರು ಬೆದರಿಸಿ 15 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ 400 ರೂ.ಹಣ ಕಿತ್ತುಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ನಡೆದಿದೆ.
ವಿಶ್ವೇಶ್ವರಯ್ಯ ಬಡಾವಣೆಯ 8ನೆ ಬ್ಲಾಕ್ ಮುಖಾಂತರ ತಿಮ್ಮಪ್ಪ ಎಂಬುವರು ಶುಕ್ರವಾರ ರಾತ್ರಿ 8.50ರಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ಹಿಂಬಾಲಿಸಿ ತಿಮ್ಮಪ್ಪ ಅವರನ್ನು ಅಡ್ಡಗಟ್ಟಿ ಬೆದರಿಸಿ ಕೊರಳಲ್ಲಿದ್ದ 15 ಗ್ರಾಂ ಸರ, ಮೊಬೈಲ್ ಹಾಗೂ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





