ಹನೂರು : ವಿಶ್ವ ವಿಕಲಚೇತನರ ದಿನಾಚರಣೆ

ಹನೂರು,ಡಿ.3: ಅಂಗವಿಕಲತೆ ಶಾಪವಲ್ಲ ಅದನ್ನು ಮೆಟ್ಟಿ ನಿಲ್ಲುವ ಮೂಲಕ ಸಮಾಜದಲ್ಲಿ ಎಲ್ಲರಂತೆ ಬದುಕು ರೂಪಿಸಿಕೂಳ್ಳುಬೇಕು ಎಂದು ಶಾಸಕ ಆರ್ ನರೇಂದ್ರರಾಜೂ ಗೌಡ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕಚೇರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಗಾಟಿಸಿ ಮಾತನಾಡಿದ ಅವರು ವಿಶೇಷಚೇತನ ಮಕ್ಕಳು ಬುದ್ದಿವಂತಿಕೆಯಲ್ಲಿ ಎಲ್ಲಾ ಮಕ್ಕಳಿಗೂ ಕೂಡ ಸರಿ ಸಮಾನವಾಗಿ ನಿಲ್ಲಬಲ್ಲರು. ಅವರಲ್ಲಿರುವ ಪ್ರತಿಬೆಗಳನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಎಲ್ಲರ ರೀತಿ ಬದುಕು ರೂಪಿಸಿಕೂಳ್ಳುವಂತೆ ಮಾಡುವುದು ನಮ್ಮಲ್ಲೆರಾ ಕರ್ತವ್ಯ ಎಂದು ಹೇಳಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಕಾರ್ತಿಕ್‍ರವರು ಮಾತನಾಡಿ ವಿಶೇಷಚೇತನರಿಗೆ ದೊರುಕುವ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸ್ವಾವಲಂಬಿಗಳಾಗಿ ದುಡಿಯಲು ಸಹಕಾರಿಯಾಗುವಂತಹ ವಾತವರಣ ಸೃಷ್ಠಿಯಾಗಬೇಕು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶ್ವ ವಿಕಲಚೇತನರ ಮಕ್ಳಳ ದಿನಾಚರಣೆಯ ಪ್ರಯುಕ್ತ ಮಕ್ಕಳು ಮತ್ತು ಪೋಷಕರಿಗೆ ಆಯೋಜಿಸಿದ್ದ ಕ್ರೀಡಾಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಪಟ್ಟಣ ಪಂಚಾಯತ್ ಅದ್ಯಕ್ಷರಾದ ಮಮತ ಮಹದೇವ್, ಉಪಾದ್ಯಕ್ಷರಾದ ಬಸವರಾಜು, ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷರಾದ ನಂಜುಂಡಸ್ವಾಮಿ, ಪ್ರಾಥಮಿಕಶಾಲೆ ಶಿಕ್ಷಕರ ಸಂಘದ ಉಪಾದ್ಯಕ್ಷ ಶಿವಮಲ್ಲು, ಬಿಆರ್‍ಪಿಗಳಾದ ಆಶೋಕ್, ಶ್ರೀನಿವಾಸ್‍ನಾಯ್ಡು, ಸತೀಶ್,ವೆಂಕಟರಾಜು , ಶಿವಕುಮಾರಿ ಬಿಐಆರ್‍ಟಿಯಾದ ಕೃಷ್ಣ , ಮತ್ತು ಸಿಆರ್‍ಪಿಗಳು ಶಿಕ್ಷಕರು ಹಾಗೂ ಇನ್ನಿತರರು ಹಾಜರಿದ್ದರು.







