ಬೆಂಗಳೂರು : ಶಾಲಾ ಗೋಡೆ ಕುಸಿತ ತಪ್ಪಿದ ಅನಾಹುತ
ಬೆಂಗಳೂರು, ಡಿ.3: ಹಳೇ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಗೋಡೆ ಕುಸಿದು ಸಾಲು ಸಾಲು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರಂ ಸಮೇತ ಧರೆಗುರುಳಿದ ಘಟನೆ ಯಶವಂತಪುರ ಮಾರ್ಕೆಟ್ ಬಳಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರವಿವಾರ ಬೆಳಗ್ಗೆ ಯಶವಂತಪುರದ ತರಕಾರಿ ಮಾರ್ಕೆಟ್ ಬಳಿ ಇರುವ ಸುಮಾರು 60 ವರ್ಷ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಏಕಾಏಕಿ ಗೋಡೆ ಕುಸಿದು ವಿದ್ಯುತ್ ಕಂಬಗಳ ಮೇಲೆ ಬಿದ್ದು ಟ್ರಾನ್ಸ್ ಫಾರಂ ಮತ್ತು 6 ವಿದ್ಯುತ್ ಕಂಬಗಳು ನೆಲಕ್ಕುರುಳಿ ಎರಡು ಬೈಕ್ ಮತ್ತು ನಾಲ್ಕು ತರಕಾರಿ ಗಾಡಿಗಳು ಜಖಂಗೊಂಡಿದೆ.
ಕಟ್ಟಡ ತೆರವು ಕಾರ್ಯಾಚರಣೆ ಕುರಿತು ಸ್ಥಳೀಯ ವ್ಯಾಪಾರಿಗಳಿಗೆ ಮಾಹಿತಿ ನೀಡಿ ಈ ಸ್ಥಳದಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಬೇರೆ ಕಂಬಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
Next Story





