ಕೊಳ್ಳೇಗಾಲ : ಖಾತಾ ಆಂದೋಲನ ಕಾರ್ಯಕ್ರಮ

ಕೊಳ್ಳೇಗಾಲ,ನ: ಪಟ್ಟಣದ ಬಸ್ತಿಪುರ ಬಡಾವಣೆಯ ನಾಯಕ ಸಮುದಾಯ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಖಾತಾ ಆಂದೋಲನ ಕಾರ್ಯಕ್ರಮವನ್ನು ಶಾಸಕ ಎಸ್.ಜಯಣ್ಣ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಳೆದ 80 ವರ್ಷಗಳಿಂದ ನಿವೇಶನ ಹಾಗೂ ಖಾಲಿ ಜಾಗಗಳಿಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಅಂತಹವರನ್ನು ಗುರುತಿಸಿ ಖಾತೆ ಆಂದೋಲನದಲ್ಲಿ ಖಾತೆ ಮಾಡಿಸಿಕೊಟ್ಟಿದೆವೆ. ಅಲ್ಲದೆ ಬಸ್ತೀಪುರ ಬಡಾವಣೆಯಲ್ಲಿ ನಡೆದ ಈ ಖಾತಾ ಆಂದೋಲನ ಯಶಸ್ವಿಯಾಗಿರುವುದರಿಂದ ಇದನ್ನು ಇಡೀ ಪಟ್ಟಣ ವ್ಯಾಪ್ತಿಗೆ ವಿಸ್ತರಣೆ ಮಾಡಿ ಖಾತಾ ಆಂದೋಲನದ ಕೆಲಸವನ್ನು ಖಾಸಗಿ ಏಜೆನ್ಸಿಯವರಿಗೆ ನೀಡುವ ಮೂಲಕ ಎಲ್ಲ ಬಡ ಜನರಿಗೂ ಖಾತೆ ಮಾಡಿಸುವ ಪ್ರಯತ್ನ ಇದೆ. ನಂತರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಅವಾಜ್ ಯೋಜನೆಯಡಿ ಅರ್ಹ ಪಲಾನುಭವಿಗಳನ್ನು ಗುರ್ತಿಸಿ ಮನೆ ನೀಡಲಾಗುವುದು ಎಂಡು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಶಾಂತರಾಜು, ನಗರಸಭೆ ಸದಸ್ಯೆ ಸುರೇಶ್‍ನಾಯಕ್, ನಗರಸಭೆ ಸದಸ್ಯೆ ರಾಘವೇಂದ್ರ, ಅಂಬೇಡ್ಕರ್ ಸಂಘದ ಅಧ್ಯಕ್ಷ ರವಿ, ಸಿದ್ದನಾಯಕ್, ಶಿವಣ್ಣ, ಜವರನಾಯಕ ವಾಲ್ಮೀಕಿ ಸಂಘದ ಯುವಕರು ಮತ್ತಿತರರು ಇದ್ದರು.





