ಗುಜರಾತ್ ನಲ್ಲಿ ಮಹಿಳಾ ಸಾಕ್ಷರತೆ 57 ಶೇ.ಕ್ಕೆ ಕುಸಿದದ್ದೇಕೆ: ಪ್ರಧಾನಿಗೆ ರಾಹುಲ್ ಪ್ರಶ್ನೆ

ಹೊಸದಿಲ್ಲಿ, ಡಿ.3: ಚುನಾವಣೆಯನ್ನು ಎದುರು ನೋಡುತ್ತಿರುವ ಗುಜರಾತ್ ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಹಿಳೆಯರ ಸುರಕ್ಷತೆ, ಶಿಕ್ಷಣ ಹಾಗು ಮಹಿಳೆಯರ ಮೇಲಿನ ದೌರ್ಜನ್ಯಗಳು ರಾಜ್ಯದಲ್ಲಿ ಹೆಚ್ಚಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದರು.
22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳ ಪ್ರಮಾಣ ಹೆಚ್ಚಿದೆ. ಪ್ರಧಾನಿ ಮೋದಿ ಗುಜರಾತಿನ ಮಹಿಳೆಯರಿಗೆ ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದವರು ಆರೋಪಿಸಿದರು.
ಮಾನವ ಕಳ್ಳಸಾಗಣೆಯಲ್ಲಿ ಗುಜರಾತ್ ಮೂರನೆ ಸ್ಥಾನದಲ್ಲಿ, ಆ್ಯಸಿಡ್ ದಾಳಿಗಳಲ್ಲಿ 5ನೆ ಸ್ಥಾನದಲ್ಲಿ ಹಾಗು ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳಲ್ಲಿ 10ನೆ ಸ್ಥಾನದಲ್ಲಿದೆ ಎಂದು ವಿವಿಧ ವರದಿಗಳನ್ನು ಉಲ್ಲೇಖಿಸಿ ಅವರು ಹೇಳಿದರು.
2001ರಲ್ಲಿ 70 ಶೇ.ದಷ್ಟಿದ್ದ ಮಹಿಳಾ ಸಾಕ್ಷರತೆ 2011ರ ವೇಳೆಗೆ 57 ಶೇ.ಕುಸಿದದ್ದೇಕೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಹ್ಮದಾಬಾದ್ ಹಾಗು ಸೂರತ್ ಟಾಪ್ 10 ನಗರಗಳಲ್ಲಿ ಸ್ಥಾನ ಪಡೆದದ್ದೇಕೆ ಎಂದು ರಾಹುಲ್ ಪ್ರಧಾನಿಯವರನ್ನು ಪ್ರಶ್ನಿಸಿದರು.







