Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ:...

ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ‘ಸಂದೇಹ ಸಾಮ್ರಾಜ್ಯ’ ಪ್ರಥಮ

ವಾರ್ತಾಭಾರತಿವಾರ್ತಾಭಾರತಿ3 Dec 2017 8:11 PM IST
share
ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: ‘ಸಂದೇಹ ಸಾಮ್ರಾಜ್ಯ’ ಪ್ರಥಮ

ಉಡುಪಿ, ಡಿ.3: ಉಡುಪಿ ರಂಗಭೂಮಿ ವತಿಯಿಂದ ಏರ್ಪಡಿಸಲಾದ ಡಾ.ಟಿ.ಎಂ.ಎ.ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವ ರಾಜ್ ಸ್ಮಾರಕ 38ನೆಯ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಹೆಗ್ಗೋಡು ಕೆ.ವಿ.ಸುಬ್ಬಣ್ಣ ರಂಗ ಸಮೂಹ ಅಭಿನಯದ ‘ಸಂದೇಹ ಸಾಮ್ರಾಜ್ಯ’ ನಾಟಕವು ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದೆ.

ಪ್ರಥಮ ಬಹುಮಾನವು 25000ರೂ. ನಗದು ಸಹಿತ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ಒಳಗೊಂಡಿದೆ. ಭೂಮಿಕಾ ಹಾರಾಡಿ ತಂಡದ ‘ವೃತ್ತದ ವೃತ್ತಾಂತ’ ನಾಟಕವು ದ್ವಿತೀಯ (20000ರೂ. ನಗದು ಸಹಿತ ಫಲಕ) ಮತ್ತು ಲಾವಣ್ಯ ಬೈಂದೂರು ತಂಡದ ‘ಗಾಂಧಿಗೆ ಸಾವಿಲ್ಲ’ ನಾಟಕವು ತೃತೀಯ(15000ರೂ. ನಗದು ಸಹಿತ ಫಲಕ) ಬಹುಮಾನ ಪಡೆದುಕೊಂಡಿದೆ.

ವಿವಿಧ ಬಹುಮಾನಗಳ ವಿವರ ಈ ಕೆಳಗಿನಂತಿವೆ. ಶ್ರೇಷ್ಠ ನಿರ್ದೇಶನ: ಪ್ರ- ಮಂಜುನಾಥ್ ಎಲ್.ಬಡಿಗೇರ(ಸಂದೇಹ ಸಾಮ್ರಾಜ್ಯ), ದ್ವಿ- ಬಿ.ಎಸ್. ರಾಮಶೆಟ್ಟಿ ಹಾರಾಡಿ(ವೃತ್ತದ ವೃತ್ತಾಂತ), ತೃ- ಗುರುರಾಜ ಮಾರ್ಪಳ್ಳಿ( ರಥಯಾತ್ರೆ). ಶ್ರೇಷ್ಠ ನಟ: ಪ್ರ-ಏಸು ಪ್ರಕಾಶ್(ಸಂದೇಹ ಸಾಮ್ರಾಜ್ಯದ ವಿಜಯರಾಯರು ಪಾತ್ರ), ದ್ವಿ- ರವಿ ಪೇತ್ರಿ(ವೃತ್ತದ ವೃತ್ತಾಂತದ ನ್ಯಾಯಾಧೀಶ ಪಾತ್ರ), ತೃ- ರಾಜಗೋಪಾಲ್ ಶೇಟ್( ರಥಯಾತ್ರೆಯ ನಿರೂಪಕ ಪಾತ್ರ). ಶ್ರೇಷ್ಠ ನಟಿ: ಪ್ರ- ಶೈಲಜ ಪ್ರಕಾಶ್(ಸಂದೇಹ ಸಾಮ್ರಾಜ್ಯದ ಪೂರ್ಣಿಮಾದೇವಿ ಪಾತ್ರ), ದ್ವಿ-ಮಂಜುಳಾ ಜನಾದರ್ನ್(ಕೇಳೆ ಸಖಿ ಚಂದ್ರಮುಖಿಯ ಮಾಯಾ ಶೂರ್ಪನಖಿ ಪಾತ್ರ), ತೃ-ಪದ್ಮಶ್ರೀ ಹಾರೆಗೊಪ್ಪ(ಸಂದೇಹ ಸಾಮ್ರಾಜ್ಯದ ಶತತಾರ ಪಾತ್ರ)

 ಶ್ರೇಷ್ಠ ಸಂಗೀತ: ಪ್ರ-ರಥಯಾತ್ರೆ(ಸುಮನಸಾ ಕೊಡವೂರು), ದ್ವಿ- ಸಂದೇಹ ಸಾಮ್ರಾಜ್ಯ(ಕೆ.ವಿ.ಸುಬ್ಬಣ್ಣ ರಂಗಸಮೂಹ, ಹೆಗ್ಗೋಡು), ತೃ-ತುಕ್ರನ ಕನಸು (ಅನಿಕೇತನ ಸಿಯೋನ್ ಪ್ರತಿಷ್ಠಾನ, ಬೆಂಗಳೂರು). ಶ್ರೇಷ್ಠ ರಂಗಪರಿಕರ: ಪ್ರ- ವೃತ್ತದ ವೃತ್ತಾಂತ(ಭೂಮಿಕಾ ಹಾರಾಡಿ), ದ್ವಿ-ಸಂದೇಹ ಸಾಮ್ರಾಜ್ಯ (ರಂಗ ಸಮೂಹ, ಹೆಗ್ಗೋಡು), ತೃ-ಗಾಂಧಿಗೆ ಸಾವಿಲ್ಲ(ಲಾವಣ್ಯ ಬೈಂದೂರು). ಶ್ರೇಷ್ಠ ರಂಗಪ್ರಸಾಧನ: ಪ್ರ- ವೃತ್ತದ ವೃತ್ತಾಂತ(ಭೂಮಿಕಾ ಹಾರಾಡಿ) ದ್ವಿ- ಸಂದೇಹ ಸಾಮ್ರಾಜ್ಯ(ರಂಗಸಮೂಹ ಹೆಗ್ಗೋಡು) ತೃ-ಗಾಂಧಿಗೆ ಸಾವಿಲ್ಲ (ಲಾವಣ್ಯ ಬೈಂದೂರು). ಶ್ರೇಷ್ಠ ಬೆಳಕು: ಪ್ರ- ವೃತ್ತದ ವೃತ್ತಾಂತ, ದ್ವಿ- ಗಾಂಧಿಗೆ ಸಾವಿಲ್ಲ, ತೃ-ಮಲಾಲ ಅಲ್ಲಾ (ವನಸುಮ ವೇದಿಕೆ ಕಟಪಾಡಿ). ಶ್ರೇಷ್ಠ ಹಾಸ್ಯ: ಪೂರ್ಣೇಶ್ ಆಚಾರ್ಯ(ಕೇಳೆ ಸಖಿ ಚಂದ್ರಮುಖಿಯ ಭಾಗವತ ಪಾತ್ರ). ಮೆಚ್ಚುಗೆ ಬಹುಮಾನಗಳು: ಶ್ವೇತಾ ಮಣಿಪಾಲ(ವೃತ್ತದ ವೃತ್ತಾಂತ ನಾಟಕದ ವಲ್ಲಿ ಪಾತ್ರ), ಪ್ರಸನ್ನ ಎಚ್.ಎಸ್.ಹುಣಸೇಕೊಪ್ಪ(ಸಂದೇಹ ಸಾಮ್ರಾಜ್ಯ ನಾಟಕದ ಆನಂದರಾಯರುಪಾತ್ರ), ಸಿತಾರಾ(ವರಾಹ ಪುರಾಣದ ಹನುಮಕ್ಕ ಪಾತ್ರ), ಸುಬ್ರಹ್ಮಣ್ಯ ಜಿ.(ಗಾಂಧಿಗೆ ಸಾವಿಲ್ಲ ನಾಟಕದ ನಾತುರಾಂ ಗೋಡ್ಸೆ ಪಾತ್ರ), ಗುರುಮೂರ್ತಿ ವರದಾಮೂಲ(ಸಂದೇಹ ಸಾಮ್ರಾಜ್ಯದ ವೃಶ್ಚಿಕ ಪಾತ್ರ).

ಈ ಸ್ಪರ್ಧೆಯಲ್ಲಿ ರಾಮಕೃಷ್ಣ ಹೇರಳೆ, ಬೆಳಗೋಡು ರಮೇಶ ಭಟ್, ಜಯ ರಾಂ ನೀಲಾವರ್, ಜಯಶೇಖರ್ ಮಡಪ್ಪಾಡಿ ಹಾಗೂ ಅಭಿಲಾಶಾ ಹಂದೆ ತೀರ್ಪುಗಾರರಾಗಿ ಸಹಕರಿಸಿದ್ದರು. ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಜ.7ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಅಕ್ಷರ ಕೆ.ವಿ.ಗೆ ರಂಗ ಭೂಮಿ ಪ್ರಶಸ್ತಿ ಪ್ರದಾನ ಹಾಗೂ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿರುವ ಸಂದೇಹ ಸಾಮ್ರಾಜ್ಯ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X