ಅಹಿತಕರ ಘಟನೆಗಳೊಂದಿಗೆ ದತ್ತ ಜಯಂತಿಗೆ ತೆರೆ

ಚಿಕ್ಕಮಗಳೂರು, ಡಿ.3: ಕಳೆದ 11 ದಿನಗಳಿಂದ ವಿಎಚ್‌ಪಿ ಹಾಗೂ ಬಜರಂಗದಳ ಆಯೋಜಿಸಿದ್ದ ದತ್ತ ಜಯಂತಿ ಅಹಿತಕರ ಘಟನೆಗಳೊಂದಿಗೆ ರವಿವಾರ ತೆರೆ ಕಂಡಿತು.
ಅಂತಿಮ ದಿನವಾದ ಇಂದು ವಿವಾದಿತ ಬಾಬಾಬುಡನ್‌ಗಿರಿಯ ದತ್ತ ಗುಹೆಯಲ್ಲಿ ದತ್ತ ಭಕ್ತರು ದತ್ತಪಾದುಕೆ ದರ್ಶನ ಮಾಡಿದರು. ಜಿಲ್ಲಾಡಳಿತ ನಿರ್ಮಿಸಿದ್ದ ಶೆಡ್‌ನಲ್ಲಿ ದತ್ತ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಹೋಮ-ಹವನ ಹಾಗೂ ಧಾರ್ಮಿಕ ಸಭೆ ನಡೆಸಿದರು. ಪೊಲೀಸ್ ಸರ್ಪಗಾವಲಿನ ನಡುವೆಯೂ ಮಾಲಾಧಾರಿಗಳು ನಿಷೇಧಿತ ಸ್ಥಳದಲ್ಲಿ ಕೇಸರಿ ಬಾವುಟ ಹಾರಿಸಿ ಕೇಕೆ ಹಾಕಿ ಕುಣಿದಾಡಿದರು.
ಕಳೆದ 11 ದಿನಗಳಿಂದ ವ್ರತಾಚರಣೆ ಮಾಡಿ, ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ್ದ ಇರುಮುಡಿ ವಿಸರ್ಜಿಸಿದ ಭಕ್ತರು, ಸಮೀಪದ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಕಾಲ್ನಡಿಗೆಯಲ್ಲಿ ಗಿರಿಯತ್ತ ತೆರಳಿದರು. ವಿವಾದಿತ ಸ್ಥಳದ 200 ಮೀಟರ್ ದೂರಳತೆಯಲ್ಲಿ ಜಿಲ್ಲಾಡಳಿತ ನಿರ್ಮಿಸಿದ್ದ ಶೆಡ್‌ನಲ್ಲಿ ದತ್ತಾತ್ರೇಯರ ವಿಗ್ರಹವಿಟ್ಟು ಪೂಜೆ ಹೋಮ-ಹವನ ನಡೆಸಿದರು.
ಸುಮಾರು 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿತ್ತು. ವಿವಾದಿತ ಸ್ಥಳದಲ್ಲಿ ಕೇಸರಿ ಬಾವುಟ ಹಾರಿಸಿದ್ದಲ್ಲದೆ, ಗೋರಿಗಳನ್ನು ಧ್ವಂಸಗೈಲು ಯತ್ನಿಸಿದಾಗ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಪೊಲೀಸರು ಹರಸಾಹನ ಪಟ್ಟು ಹತೋಟಿಗೆ ತಂದರು. ಬಾಬಾಬುಡಾನ್‌ಗಿರಿಗೆ ತೆರಳುವ ಮಾರ್ಗ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸಲಾಗಿತ್ತು. ಕೆಲ ಕಾಲ ಟ್ರಾಫಿಕ್‌ಜಾಂನಲ್ಲಿ ಸಿಲುಕಿ ಪರದಾಡಬೇಕಾದ ಸ್ಥಿತಿ ಕೂಡ ಉಂಟಾಯ್ತು. ಈ ಬಾರಿಯ ದತ್ತಜಯಂತಿ ಕೆಲ ಅಹಿತಕರ ಘಟನೆಗಳೊಂದಿಗೆ ತೆಕಂಡಿತು.
ಸ್ಥಳದಲ್ಲಿ ಪಶ್ವಿಯ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಎಸ್ಪಿಅಣ್ಣಾಮಲೈ, ಜಿಲ್ಲಾಧಿಕಾರಿ ಶ್ರೀರಂಗಯ್ಯ ಮೆಕ್ಕಾಂ ಹೂಡಿದ್ದಾರೆ.







