‘ಬೊಳ್ಮದ ಕಂಡೊಡೊಂಜಿ ದಿನತ್ತ ಗಮ್ಮತ್ತ್’ ಕಾರ್ಯಕ್ರಮ ಉದ್ಘಾಟನೆ

ಕೊಣಾಜೆ, ಡಿ. 3: ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ ಇದರ ಕೊಣಾಜೆ ಗ್ರಾಮ ಸಮಿತಿ, ಯುವಘಟಕ ಮತ್ತು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಬೊಳ್ಮದ ಕಂಡೊಡೊಂಜಿ ದಿನತ್ತ ಗಮ್ಮತ್ತ್ ಮತ್ತು ನಳಿನಾಕ್ಷಿ ಪರಂಡೆ ಇವರ ನಿವಾಸಕ್ಕೆ ಶಿಲಾನ್ಯಾಸ, ಕೊಣಾಜೆ ಯುವ ಘಟಕದ 11ನೆ ವಾರ್ಷಿಕೋತ್ವವ ಕಾರ್ಯಕ್ರಮ ರವಿವಾರ ಪರಂಡೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಅವರು ನಾವು ಆದಷ್ಟು ಕೃಷಿ ಕಾರ್ಯದಲ್ಲಿದ ತೊಡಗಿಸಿಕೊಳ್ಳುವುದರೊಂದಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು ಅವರು ಮಾತನಾಡಿ, ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘವು ಕಳೆದ ಹಲವಾರು ವರ್ಷಗಳಿಂದ ನಾರಾಯಣ ಗುರುವರ್ಯರ ಆಶಯದಂತೆ ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ ಇಂತಹ ಕೆಸರು ಗದ್ದೆಯ ಕ್ರೀಡಾಕೂಟದ ಮೂಲಕ ಸಮಾಜದಲ್ಲಿ ಸಾಮರಸ್ಯದ ಜೀವನವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಧಾರ್ಮಿಕ ಪರಿಷತ್ ಸದಸ್ಯರಾದ ಕೃಷ್ಣ ಗಟ್ಟಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಸರು ಗದ್ದೆಯ ಕ್ರೀಡಾಕೂಟಗಳು ನಮ್ಮ ಹಿರಿಯರ ಕಾಲದ ಸಂಪ್ರದಾಯ ಸಂಸ್ಕೃತಿಗಳನ್ನು ಅರಿಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಕೆ.ಲಕ್ಷ್ಮಣ ಕೋಟ್ಯಾನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಕುದ್ರೋಳಿ ಗೋಕಾರ್ನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಚಲನಚಿತ್ರ ನಟ ನಿರ್ದೇಶಕ ಡಾ.ರಾಜಶೇಖರ ಕೋಟ್ಯಾನ್, ಪುತ್ತೂರು ಗೆಜ್ಜೆಗಿರಿ ನಂದನ ಬಿತ್ತಿಲ್ ಕೋಟಿಚೆನ್ನಯ ಮೂಲಸ್ಥಾನದ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ವಿಶ್ವಹಿಂದೂ ಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷರಾದ ಹರಿದಾಸ್ ಕೆ, ಕಾಂಗ್ರೆಸ್ ಮುಖಂಡ ಸಂತೋಷ್ ಕುಮಾರ್ ಶೆಟ್ಟಿ, ಮುಸ್ತಫಾ ಹರೇಕಳ, ನಾರಾಯಣ ಗುರು ಭಜನಾ ಮಂದಿರದ ಅರ್ಚಕ ದೇವಪ್ಪ ಶಾಂತಿ, ಉದ್ಯಮಿ ಅಬ್ದುಲ್ ನಾಸೀರ್ ಕೆ.ಕೆ., ಎಸ್‌ಕೆಡಿಆರ್‌ಪಿಯ ಯೋಜನಾಧಿಕಾರಿ ಉಮರಬ್ಬ, ಗೆಜ್ಜೆಗಿರಿ ಸಮಿತಿಯ ರಾಘವ ಪೂಜಾರಿ ಪಂಡಿತ್ ಹೌಸ್, ಬಿಲ್ಲವ ಸಂಘದ ಈಶ್ವರ ಕನೀರುತೋಟ, ನಾರಾಯಣ ಗುರು ಮಹಿಳಾ ಘಟಕದ ಸುಜಾತ ಹರೇಕಳ, ಅಂಬ್ಲಮೊಗರು ನಾರಾಯಣ ಗುರು ಸೇವಾ ಸಂಘದ ಚಂದ್ರಹಾಸ್ ಸಾಲಿಯಾನ್, ಜಯಂತ್ ಪೂಜಾರಿ ಕಿನ್ಯ, ತಾಲೂಕು ಪಂ. ಸದಸ್ಯೆ ಪದ್ಮಾವತಿ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ವಿ.ಎಸ್.ಕರ್ಕಡ, ಜಯಪ್ರಸಾದ್, ಎಪಿಎಂಸಿ ಸದಸ್ಯೆ ಮುತ್ತು ಎನ್.ಶೆಟ್ಟಿ, ರವಿ ಸುವರ್ಣ, ಬೋಜ ಕುಕ್ಯಾನ್, ಲೋಲಾಕ್ಷಿ ಡಿ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಸ್ವಸ್ತಿಕ್ ಮಾಡೂರು ಅವರನ್ನು ಸನ್ಮಾನಿಸಲಾಯಿತು.







