ವಿದ್ವಾಂಸರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮ

ಉಡುಪಿ, ಡಿ.3: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ರಾಜ್ಯ ವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಸಾಮರಸ್ಯ, ಶಾಂತಿ ಮತ್ತು ನೆಮ್ಮದಿಗಾಗಿ ಪ್ರವಾದಿ ಮುಹಮ್ಮದ್(ಸ) ಚಿಂತನೆ ಎಂಬ ಶೀರ್ಷಿಕೆಯಡಿಯಲ್ಲಿ ವಿದ್ವಾಂಸ ರೊಂದಿಗೆ ವಿಚಾರ ವಿನಿಮಯ ವಿಶೇಷ ಕಾರ್ಯಕ್ರಮವನ್ನು ರವಿವಾರ ಕಡಿ ಯಾಳಿಯ ಓಷಿಯನ್ ಪರ್ಲ್ ಹೊಟೇಲಿನಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅಥಿತಿಯಾಗಿ ಕರ್ನಾಟಕ ಜಮಾತೆ ಇಸ್ಲಾಮಿ ಹಿಂದ್ ಸಲಹಾ ಸಮಿತಿ ಸದಸ್ಯ ಮುಹಮ್ಮದ್ ಕುಂಞಿ ಮಾತನಾಡಿ, ಯಾವುದೇ ಕ್ರಿಯಾತ್ಮಕತೆ, ಪರಸ್ಪರ ಸೌಹಾದರ್ತೆ ಇಲ್ಲದ, ಧರ್ಮವನ್ನು ಮುಕ್ತವಾಗಿ ಅರಿಯದ, ಅದನ್ನು ಚರ್ಚಿಸದ ಸಮಾಜವು ಜಡ್ಡು ಕಟ್ಟಿದಂತೆ ಇರುತ್ತದೆ. ಪ್ರವಾದಿಯವರ ಶಿಕ್ಷಣದ ಒಟ್ಟು ಸಾರಾಂಶ ಎಲ್ಲಾ ಸೃಷ್ಠಿಗಳು ದೇವರಿಗೆ ವಿಧೇಯ ರಾಹಗಿರುವಂತೆಯೇ, ಮಾನವನೂ ಸಹ ಆತನಿಗೆ ವಿಧೇಯನಾಗಿರಬೇಕು. ಪ್ರವಾದಿಯವರು ನಮಗೆ ಬಹಳಷ್ಟು ಮೌಲ್ಯಗಳನ್ನು ಕಲಿಸಿದ್ದಾರೆ. ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಥರು ಲ್ಲಾಹ್ ಶರೀಫ್ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಕೇವಲ ಒಬ್ಬ ಸಮಾಜ ಸುಧಾರಕರಾಗಿರದೆ ಒಬ್ಬ ಕ್ರಾಂತಿಕಾರಿ ನಾಯಕರಾಗಿದ್ದರು. ಅವರ ಸಂದೇಶವನ್ನು ನಾವು ತಿಳಿದು, ಅಧ್ಯಯನ ನಡೆಸಿ ಇದನ್ನು ಬೇರೆಯವರಿಗೆ ತಲುಪಿಸಿ ಇದನ್ನು ಅನುಸರಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಜಮಾತೆ ಇಸ್ಲಾಮಿ ಹಿಂದ್ ಉಡುಪಿ ಅಧ್ಯಕ್ಷ ಡಾ.ಅಬ್ದುಲ್ ಅಝೀಝ್, ಜಿಲ್ಲಾ ಸಂಚಾಲಕ ಶಬ್ಬಿರ್ ಮಲ್ಪೆ, ವಲಯ ಸಂಚಾಲಕ ಅಕ್ಬರ್ ಅಲಿ ಉಪಸ್ಥಿತರಿದ್ದರು. ಶುಐಬ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.







