ಕೊಲ್ಲರಕೋಡಿ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ಕೊಣಾಜೆ, ಡಿ.3: ರಕ್ತದಾನ ಶಿಬಿರದಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸುದರಿಂದ ರಕ್ತ ಸಂಗ್ರಹದ ಜೊತೆ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಿಸಲು ಸಾಧ್ಯ ಎಂದು ಕೊಣಾಜೆ ಠಾಣಾ ಪೊಲೀಸ್ ಅಧಿಕಾರಿ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನರಿಂಗಾನ ಗ್ರಾಮದ ಕೊಲ್ಲರಕೊಡಿ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ದೇರಳಕಟ್ಟೆಯ ಯೆನೆಪೋಯ ಕಾಲೇಜಿನ ಸಹಕಾರದೊಂದಿಗೆ ಅಯೋಜಿಸಿದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿ ಮಾತನಾಡಿದರು.
ವಿಶೇಷವಾಗಿ ಯುವ ಜನತೆ ರಕ್ತದಾನ ಶಿಬಿರದಂತಹ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದಾಗ ಕೆಡುಕು ಮುಕ್ತ ಸಮಾಜವಾಗಿ ಬದಲಾಗಲು ಸಾಧ್ಯ ಎಂದು ಹೇಳಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ರಕ್ತದ ಅವಶ್ಯಕತೆ ಬಂದಾಗ ರಕ್ತದ ಗುಂಪು ಯಾವುದು ಎಂಬುದು ಮಾತ್ರ ವಿಚಾರಿಸುತ್ತಾರೆ ಹೊರತು ಜಾತಿ ಆಧಾರದಲ್ಲಿ ರಕ್ತ ನೀಡಲಾಗುತ್ತಿಲ್ಲ. ಒರ್ವ ಮುಸ್ಲಮಾನನ ರಕ್ತ ಅಗತ್ಯ ಬಂದಾಗ ಬೇರೆ ಧರ್ಮದವರಿಗೆ ನೀಡಲಾಗುತ್ತದೆ. ರಕ್ತಕ್ಕೆ ಯಾವುದೆ ಜಾತಿ ಧರ್ಮವಿಲ್ಲ. ರಕ್ತದಾನ ಮಾಡಿ ಆರೋಗ್ಯವಂತರಾಗಿ ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತ ಅಗತ್ಯ ಬಂದಾಗ ವಿಶೇಷ ಸೇವೆ ನೀಡಿದ ಯೆನೆಪೋಯ ಆಸ್ಪತ್ರೆಯ ಶಾನಿ ಪಿ. ಸಾಜಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಉದ್ಯಮಿ ಮುಸ್ತಾಫ ಎಸ್.ಎಂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚ್ ಮುಖಂಡರಾದ ಡಾ. ಮುನೀರ್ ಬಾವ, ಅಸ್ಗರ್ ಅಲಿ ಮುಡಿಪು, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಉರ್ಣಿ ಮಂಜೇಶ್ವರ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ, ಯೆನೆಪೋಯ ಕಾಲೇಜಿನ ಡಾ. ರೇಣುಕ, ಡಾ. ಗಝಾನಾ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಿದ್ದೀಕ್ ಪಾರೆ, ಗೌರವ ಸಲಹೆಗಾರ ಪ್ರೇಮಾನಂದ ರೈ, ಕೋಶಾಧಿಕಾರಿ ವಿಜಯಾನಂದ ರೈ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಎಸ್.ಎಚ್, ಕಾರ್ಯದರ್ಶಿ ಚೇತನ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಚಿತ, ಜೆಡಿಎಸ್ ಮುಖಂಡ ಶಿಹಾಬ್, ಮಾಧ್ಯಮ ಕಾರ್ಯದರ್ಶಿ ನೌಫಲ್ ಎಚ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿವೇಕಾನಂದ ರೈ ಸ್ವಾಗತಿಸಿದರು. ಅಧ್ಯಕ್ಷ ನವಾಝ್ ವಂದಿಸಿದರು.







