ಸ್ಪೇನ್ ವಿರುದ್ಧ ಬೆಲ್ಜಿಯಂಗೆ 5-0 ಭರ್ಜರಿ ಜಯ
ಹಾಕಿ ವರ್ಲ್ಡ್ ಲೀಗ್ ಫೈನಲ್
ಭುವನೇಶ್ವರ , ಡಿ.3: ಹಾಕಿ ವರ್ಲ್ಡ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಇಂದು ಸ್ಪೇನ್ ವಿರುದ್ಧ ಬೆಲ್ಜಿಯಂ ತಂಡ 5-0 ಅಂತರದಲ್ಲಿ ಜಯ ಗಳಿಸಿ ’ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಲೋಯಿಕ್ ಲ್ಯೂಪಾರ್ಟ್ ಹ್ಯಾಟ್ರಿಕ್ ಗೋಲು , ಫ್ಲೋರೆಂಟ್ ವ್ಯಾನ್ ಅಬೆಲ್ ಮತ್ತು ಕೆಡ್ರಿಕ್ ಚಾರ್ಲಿಯರ್ ತಲಾ 1 ಗೋಲು ನೆರವಿನಲ್ಲಿ ಬೆಲ್ಜಿಯಂ ತಂಡ ಭರ್ಜರಿ ಗೆಲುವು ದಾಖಲಿಸಿತು.
ಫ್ಲೋರೆಂಟ್ 3ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಖಾತೆ ತೆರೆದರು.ಬಳಿಕ ಲೋಯಿಕ್ 38ನೇ ನಿಮಿಷದಲ್ಲಿ , 57ನೇ ನಿಮಿಷದಲ್ಲಿ ಮತ್ತು 59ನೇ ನಿಮಿಷದಲ್ಲಿ ಗೋಲು ಜಮೆ ಮಾಡಿದರು. ಚಾರ್ಲಿಯರ್ 58ನೇ ನಿಮಿಷದಲ್ಲಿ ಗೋಲು ಜಮೆ ಮಾಡಿದ್ದರು.
Next Story





