Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ4 Dec 2017 12:34 AM IST
share
ಓ ಮೆಣಸೇ...

ಸೆಕ್ಯುಲರ್ ಪದ ಕೇಳಿದರೆ ಕೇಂದ್ರ ಸಚಿವ ಅನಂತ ಕುಮಾರ್ ಬೆಚ್ಚಿಬೀಳುತ್ತಾರೆ - ಚಂದ್ರಶೇಖರ ಪಾಟೀಲ, ಸಾಹಿತಿ
‘ಸಂವಿಧಾನ’ದ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ ಎಂದ ಮೇಲೆ ಇದರಲ್ಲಿ ವಿಶೇಷ ಏನಿದೆ?

---------------------
ಭಾರತ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ - ಸದಾನಂದ ಗೌಡ, ಕೇಂದ್ರ ಸಚಿವ
ನಿಮ್ಮಂಥವರೆಲ್ಲ ಸೇರಿದರೆ ಭಾರತ ಕಳ್ಳರ ಗುರು ಆಗುವ ಅಪಾಯವಿದೆ.
---------------------

ಉಗ್ರವಾದದಿಂದ ಮಾನವತೆಗೆ ಅಪಾಯ - ನರೇಂದ್ರಮೋದಿ, ಪ್ರಧಾನಿ
ಆರೆಸ್ಸೆಸ್ ಗೆಳೆಯರಿಗೆ ಕಿವಿ ಮಾತು.

---------------------
ಪ್ರಧಾನಿ ಮೋದಿ ಹುಲಿ , ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಿ - ಶೋಭಾ ಕರಂದ್ಲಾಜೆ, ಸಂಸದೆ
ಮನುಷ್ಯರನ್ನು ಹುಲಿ, ಇಲಿ ಎಂದು ಗುರುತಿಸುವುದನ್ನು ಬಿಟ್ಟು ಬಿಡಿ. ಹುಲಿಗಳಿಗೆ, ಇಲಿಗಳಿಗೆ ಅವಮಾನಿಸದಿರಿ.

---------------------
ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ಜಾತಿವಾದಿ ನಾಯಕರು ಮುಳುಗಲಿದ್ದಾರೆ - ವಿಜಯ ರೂಪಾಣಿ ,ಗುಜರಾತ್ ಮುಖ್ಯಮಂತ್ರಿ
ಹೆಣಗಳು ತೇಲುವುದು ಸಹಜ.

---------------------
ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ಹಾಕಿ - ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಗುಜರಾತನ್ನು ಗೆಲ್ಲಿಸುವ ಅಭ್ಯರ್ಥಿಗೆ ಮತ ಹಾಕಿದರೂ ಸಾಕು!
---------------------
ಸಾಹಿತ್ಯ ಸಮ್ಮೇಳನ ಮತಕೇಳುವ ವೇದಿಕೆಯಲ್ಲ - ಅನಂತ ಕುಮಾರ್, ಕೇಂದ್ರ ಸಚಿವ
ಅದಕ್ಕಾಗಿ ಧರ್ಮಸಂಸದ್‌ನಲ್ಲಿ ವ್ಯವಸ್ಥೆಯಿದೆ ಅಂತೀರಾ?
---------------------
ಭಾರತೀಯ ಮುಸ್ಲಿಮರೆಲ್ಲ ಶ್ರೀರಾಮನ ವಂಶಸ್ಥರು - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ಮತ್ತೆ ತಾವು ರಾವಣನ ವಂಶದವರಾ?
---------------------
ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಇಂದಿರಾ ಗಾಂಧಿಯ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು - ಪ್ರಮೋದ್ ಮಧ್ವರಾಜ್, ಸಚಿವ
ಮತ್ತು ತಮಗೆ ಮಾತ್ರ ಪೇಜಾವರ ಶ್ರೀಗಳು ಆದರ್ಶವೇ?
---------------------
ನಾನು ಮೀಸಲಾತಿ ವಿರೋಧಿಯಲ್ಲ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಬಹುಶಃ ಮನು ನೀಡಿರುವ ಮೀಸಲಾತಿಯ ಕುರಿತಂತೆ ಹೇಳುತ್ತಿರಬೇಕು.

---------------------
ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಲು ಸರಕಾರ ಶೀಘ್ರ ಕಾನೂನು ತರಲಿದೆ - ಯು.ಟಿ ಖಾದರ್, ಸಚಿವ
ಇನ್ನೂ ಕಾನೂನು ತರುವ ಹಂತದಲ್ಲೇ ಉಳಿದಿದ್ದೀರಿ. ಸದ್ಯಕ್ಕೆ ಜಾತ್ಯತೀತ ಶಕ್ತಿಗಳನ್ನು ಮಟ್ಟ ಹಾಕಲು ಈಗಾಗಲೇ ಕೇಂದ್ರ ಕಾನೂನು ಜಾರಿಗೊಳಿಸಿ ಆಗಿದೆ.

---------------------
ಚಂಪಾ ಬಾಯಿಬಿಟ್ಟರೆ ಮೂತ್ರ ವಾಸನೆ ಬರುತ್ತದೆ - ಪ್ರತಾಪ ಸಿಂಹ, ಸಂಸದ
ಬಾಯಿಯೆಂದು ತಪ್ಪು ತಿಳಿದು, ಎಲ್ಲೆಲ್ಲೋ ಮೂಸಿದರೆ ಹೀಗೆ ಆಗುತ್ತದೆ.

---------------------
ಚಹಾ ಮಾರಿದ್ದೇನೆ ಆದರೆ, ದೇಶವನ್ನು ಮಾರಿಲ್ಲ - ನರೇಂದ್ರಮೋದಿ, ಪ್ರಧಾನಿ
ಪುಕ್ಕಟೆ ಹಂಚಿ ಬಿಟ್ಟಿದ್ದೀರಿ.

---------------------
ಜೆಡಿಎಸ್ ಗೆದ್ದರೆ ದಲಿತ, ಮುಸ್ಲಿಮರಿಗೆ ಉಪ ಮುಖ್ಯಮಂತ್ರಿ ಪಟ್ಟ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಮುಖ್ಯಮಂತ್ರಿ ಪಟ್ಟವೇಕೆ, ದಲಿತರಿಗೆ, ಮುಸ್ಲಿಮರಿಗೆ ಒಪ್ಪುವುದಿಲ್ಲವೇ?
---------------------
ಚಂಪಾ ಸಿಎಂ ಚಂಚಾ - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ಅವರು ಚಮಚಾ. ನೀವು ಆರೆಸ್ಸೆಸ್‌ನ ಬಾಳೆಯೆಲೆ. ಅಷ್ಟೇ ವ್ಯತ್ಯಾಸ.

---------------------
ಅನಿತಾ ಕುಮಾರಸ್ವಾಮಿ ಮತ್ತು ನನ್ನದು ಅಣ್ಣ, ತಂಗಿ ಬಾಂಧವ್ಯ - ಡಿ.ಕೆ. ಶಿವಕುಮಾರ್, ಸಚಿವ
ಬಾವನ ಜೊತೆಗಿರುವ ನಿಮ್ಮ ಸಂಬಂಧವೇ ಚರ್ಚೆಯ ವಿಷಯ.

---------------------

ಬದುಕು ಪರಿಪೂರ್ಣ ಅಂದುಕೊಳ್ಳುವುದು ಬರೀ ಭ್ರಮೆ - ಬಾಬಾ ರಾಮ್‌ದೇವ್, ಯೋಗ ಗುರು
ಭ್ರಮೆಗಳನ್ನೇ ಮಾರುಕಟ್ಟೆ ಮಾಡಿಕೊಂಡು ಮಾರುತ್ತಿರುವವರು ತಾವಲ್ಲವೇ?
---------------------
ಎಮ್ಮೆ ಕರುಹಾಕಿದರೂ ಅದು ನಮ್ಮ ಸಾಧನೆ ಎನ್ನುತ್ತಿದೆ ಸಿದ್ದು ಸರಕಾರ - ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ
ರೈತನ ಹಟ್ಟಿಯಲ್ಲಿ ಎಮ್ಮೆ ಕರು ಹಾಕುವುದೂ ಒಂದು ಸಂಭ್ರಮದ ವಿಷಯವೆನ್ನುವುದು ನಿಮಗೆ ಗೊತ್ತೇ?
---------------------
ಪ್ರಧಾನಿ ಮೋದಿ ಬದುಕೇ ಬದಲಾವಣೆಯ ಸಂಕೇತ - ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಪುತ್ರಿ
ಬದಲಾವಣೆ ಅಮೆರಿಕದ ಪಾಲಿಗಿರಬೇಕು.

---------------------
ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇಲ್ಲ - ರಮ್ಯಾ, ಮಾಜಿ ಸಂಸದೆ
ಕೇಂದ್ರದ ದೊಡ್ಡ ಹುದ್ದೆಯ ಮೇಲೆಯೇ ಕಣ್ಣಿಟ್ಟಿದ್ದೀರಿ ಬಿಡಿ.

---------------------
ರಾಜ್ಯದಲ್ಲಿ ಕುಮಾರಸ್ವಾಮಿ ಪರ ಅಲೆ ಎದ್ದಿದೆ - ದೇವೇಗೌಡ, ಮಾಜಿ ಪ್ರಧಾನಿ
ಅದು ಒಖಿ ಚಂಡಮಾರುತವಾಗಿ ಜೆಡಿಎಸ್‌ನ್ನು ಧೂಳೀಪಟ ಮಾಡದಿದ್ದರೆ ಸಾಕು.

---------------------
ಅಮಿತಾಭ್ ಬಚ್ಚನ್‌ಗಿಂತ ಮೋದಿ ಉತ್ತಮ ನಟ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ತಾವೇನು ಕಮ್ಮಿಯೇ? ಮಾಸ್ಟರ್ ಮಂಜುನಾಥ್‌ಗಿಂತ ಉತ್ತಮ ಬಾಲನಟ.

--------------------
ಭಯೋತ್ಪಾದಕರಿಗೆ ಧರ್ಮವೂ ಇಲ್ಲ, ಜಾತಿಯೂ ಇಲ್ಲ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಧರ್ಮ, ಜಾತಿಯ ಆಚೆಗೆ ದೇಶಭಕ್ತರೆಂಬ ಮುಖವಾಡದಲ್ಲಿ ಓಡಾಡುತ್ತಿದ್ದಾರೆ.

---------------------
ನನಗೆ ಪ್ರಧಾನಿ ಮೋದಿ ಆಪ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ - ಆರ್.ವಿ. ದೇಶಪಾಂಡೆ, ಸಚಿವ
ಎರಡು ತಲೆಯ ಹಾವು ಎಂದು ಕರೆಯುತ್ತಾರೆ ಇಂಥವರನ್ನು.

---------------------
ಕಾಂಗ್ರೆಸ್ ಸೂಜಿದಾರ ಇದ್ದಂತೆ, ಮೋದಿ ಬಿಜೆಪಿ ಕತ್ತರಿ ಇದ್ದಂತೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಒಟ್ಟಿನಲ್ಲಿ ಕತ್ತರಿ, ಸೂಜಿಗಳೇ ದೇಶವನ್ನು ಆಳುತ್ತಿರುವುದು. ಚುಚ್ಚಿಸಿಕೊಳ್ಳುತ್ತಿರುವ ಜನಸಾಮಾನ್ಯರ ಕರ್ಮ. 
 

share
ಪಿ.ಎ.ರೈ
ಪಿ.ಎ.ರೈ
Next Story
X