ಮೂರನೇ ಟೆಸ್ಟ್: ಆ್ಯಂಜೆಲೊ ಮ್ಯಾಥ್ಯೂಸ್ ಶತಕ

ಹೊಸದಿಲ್ಲಿ, ಡಿ.4: ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾ ತಂಡದ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಶತಕ ದಾಖಲಿಸಿದ್ದಾರೆ.
ಮ್ಯಾಥ್ಯೂಸ್ ಅವರು 231 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು.
ಮ್ಯಾಥ್ಯೂಸ್ 72ನೇ ಟೆಸ್ಟ್‌ನಲ್ಲಿ 8ನೇ ಶತಕ ದಾಖಲಿಸಿದರು.
ಎರಡನೆ ದಿನದಾಟದಂತ್ಯಕ್ಕೆ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 44.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತ್ತು.
57 ರನ್ ಗಳಿಸಿರುವ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು 25 ರನ್ ಗಳಿಸಿರುವ ನಾಯಕ ದಿನೇಶ್ ಚಾಂಡಿಮಲ್ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.
ನಾಯಕ ದಿನೇಶ್ ಚಾಂಡಿಮಲ್ ಶತಕ ಗಳಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ. 87 ಓವರ್‌ಗಳ ಮುಕ್ತಾಯಕ್ಕೆ ಶ್ರೀಲಂಕಾ ತಂಡ 3 ವಿಕೆಟ್ ನಷ್ಟದಲ್ಲಿ 231 ರನ್ ಗಳಿಸಿದೆ. 105 ರನ್ ಗಳಿಸಿದ ಮ್ಯಾಥ್ಯೂಸ್ ಮತ್ತು 75 ರನ್ ಗಳಿಸಿರುವ ಚಾಂಡಿಮಲ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 127.5 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 536ರನ್ ಗಳಿಸಿ ಡಿಕ್ಲೇರ್ ಮಾಡಿತ್ತು.







