ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಮೇಲೆ ಹಲ್ಲೆ

ಪುರಿ, ಡಿ.4: ಒಡಿಶಾದಲ್ಲಿ ನಡೆಯುತ್ತಿದ್ದ ಕೊನಾರ್ಕ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ ಸಂದರ್ಭ ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಮೇಲೆ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದು, ಗಾಯಗೊಂಡ ಪಟ್ನಾಯಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೆಸ್ಟ್ ನಡೆಯುತ್ತಿದ್ದ ಸಂದರ್ಭ ಪಟ್ನಾಯಕ್ ಬಳಿಗೆ ಬಂದ ಅಪರಿಚಿತ ಅವರ ಕೈಗಡಿಯಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ನಂತರ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ಪಟ್ನಾಯಕ್ ರನ್ನು ಪುರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಡಿಶಾ ಸರಕಾರದ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ 5 ದಿನಗಳ ಅಂತಾರಾಷ್ಟ್ರೀಯ ಮರಳು ಶಿಲ್ಪ ಉತ್ಸವದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಪಟ್ನಾಯಕ್.
Next Story





