ಬಂಟ್ವಾಳ: ಪಿಎಫ್‌ಐನಿಂದ ಗ್ರಾಮ ಮಟ್ಟದಲ್ಲಿ ರಕ್ತದಾನ ಜಾಗೃತಿ

ಬಂಟ್ವಾಳ, ಡಿ. 4: ದೇಶದಲ್ಲಿ ರಕ್ತದ ಅಭಾವದಿಂದ ಮರಣವ ಹೊಂದುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತ ದೇಶದಲ್ಲಿ ಸಾವಿರ ಜನರಲ್ಲಿ 8 ಮಂದಿ ಮಾತ್ರ ರಕ್ತದಾನವನ್ನು ಮಾಡುತ್ತಿದ್ದಾರೆ. ಜನರಲ್ಲಿ ರಕ್ತದಾನದ ಬಗ್ಗೆಯಿರುವ ಗೊಂದಲವನ್ನು ಹೋಗಲಾಡಿಸಲು ಪಿಎಫ್‌ಐ ಪ್ರತಿ ಗ್ರಾಮ ಮಟ್ಟದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾರ್ ಅಹ್ಮದ್ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಗ್ರಹಾರ ವಲಯದ ವತಿಯಿಂದ ಫರ್ಲಾ ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪಿಎಫ್‌ಐ ಅಗ್ರಹಾರ ವಲಯಧ್ಯಕ್ಷ ಅಬೂಬಕ್ಕರ್ ಮದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಗ್ರಹಾರ ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹಂಝ ದಾರಿಮಿ, ಫರ್ಲಾ ಎಸ್.ಡಿ.ಎಮ್.ಸಿ ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಪಿ.ಎ ಅಬ್ದುಲ್ ಅಝೀರ್ ಸಅದಿ, ನಾವೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಚಂದ್ದಪ್ಪ, ಅಗ್ರಹಾರ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ. ಯೂಸುಫ್, ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸೆಂತಾ ತೆರೆಜಾ ಡಿಸೋಜ, ಕಾವಳಪಡೂರು ಗ್ರಾಪಂ ಅಬಿವೃದ್ಧಿ ಅಧಿಕಾರಿ ಮಹಮ್ಮದ್, ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಲ್ಪಾನ್ಸೋ ಫ್ರಾಂಕೋ, ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಇಮ್ತಿಯಾರ್ ತುಂಬೆ, ಮಂಗಳೂರು ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಆಂಟೋನಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 35 ವರ್ಷಗಳಿಂದ ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯರಾಗಿ ಸೇವೆ ಮಾಡುತ್ತಿರುವ ಜಸೆಂತಾ ತೆರೆಜಾ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ 86 ಜನರು ರಕ್ತದಾನ ಮಾಡಿದರು. ಶರೀಫ್
ಅಗ್ರಹಾರ ಸ್ವಾಗತಿಸಿ, ನಿರೂಪಿಸಿದರು, ಮುಸ್ತಪಾ ಬಾಂಬಿಲ ವಂದಿಸಿದರು.







