ಗುರುಪುರ ಸೇತುವೆ ನವೀಕರಣಕ್ಕೆ ಸಿಪಿಎಂ ಧರಣಿ

ಮಂಗಳೂರು, ಡಿ.4: ಗುರುಪುರ ಸೇತುವೆ ನವೀಕರಣಕ್ಕೆ ಒತ್ತಾಯಿಸಿ ಗುರುಪುರ ಕುಕ್ಕುದ ಕಟ್ಟೆಯ ಬಳಿ ಸಿಪಿಎಂ ಗುರುಪುರ ವಲಯ ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು.
ಪಕ್ಷದ ಕಾರ್ಯದರ್ಶಿ ಮಂಡಳಿಯ ಸದಸ್ಯ ಯು.ಬಿ. ಲೋಕಯ್ಯ ಮಾತನಾಡಿ ರಾ.ಹೆ.169 ರಸ್ತೆ ಸಂಚಾರಕ್ಕೆ ಏಕೈಕ ಆಧಾರವಾಗಿರುವ ಗುರುಪುರ ಸೇತುವೆಯು ಶತಮಾನದಷ್ಟು ಹಳೆಯದಾಗಿದೆ. ಅದು ಕುಸಿಯುವ ಭೀತಿಯಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರ ನಿರ್ಲಕ್ಷ್ಯವನ್ನು ತಾಳಿದೆ. ಜಿಲ್ಲೆಯ ಸ್ವಯಂ ಘೋಷಿತ ನಂಬರ್ 1 ಸಂಸದ ನಳಿನ್ ಕುಮಾರ್ ಕಟೀಲ್ ಎರಡೆರಡು ಭಾರಿ ಗೆದ್ದರೂ ಅಭಿವೃದ್ಧಿ ಶೂನ್ಯವಾಗಿದೆ. ಇವರ ಅಧಿಕಾರ ಅವಧಿಯಲ್ಲಿ ನಕಲಿ ಟೆಂಡರು ನಕಲಿ ಶಂಕು ಸ್ಥಾಪನೆಗಳು ಆಗುತ್ತಿವೆಯೇ ಹೊರತು ಅಭಿವೃದ್ಧಿ ಶೂನ್ಯ ಎಂದರು.
ಧರಣಿಯಲ್ಲಿ ಸಿಪಿಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ವಲಯ ಸಮಿತಿ ಸದಸ್ಯರಾದ ಕೆ. ಗಂಗಯ್ಯ ಅಮೀನ್, ನೋಣಯ್ಯ ಗೌಡ ಉಪಸ್ಥಿತರಿದ್ದರು.
Next Story





