ಸಿ.ಟಿ.ರವಿ, ಪ್ರತಾಪ ಸಿಂಹ ವರ್ತನೆಗೆ ಖಂಡನೆ: ಅಲಿ ಹಸನ್
ಮಂಗಳೂರು, ಡಿ.4: ಬಾಬಾ ಬುಡನ್‌ಗಿರಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಶಾಸಕ ಸಿ.ಟಿ.ರವಿ ಮತ್ತು ಹುಣಸೂರಿನಲ್ಲಿ ಹನುಮಜಯಂತಿ ಸಂದರ್ಭ ಕಾನೂನು ಕೈಗೆತ್ತಿಕೊಳ್ಳಲು ಮುಂದಾದ ಸಂಸದ ಪ್ರತಾಪ ಸಿಂಹರ ವರ್ತನೆಯನ್ನು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಖಂಡಿಸಿದ್ದಾರೆ.
ಜನಪ್ರತಿನಿಧಿಗಳಾಗಿದ್ದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರಿಬ್ಬರು ಬಿಜೆಪಿಯ ಹಿರಿಯ ನಾಯಕರನ್ನು ತೃಪ್ತಿಪಡಿಸುವ ಸಲುವಾಗಿ ದಾಂಧಲೆ ನಡೆಸುವ ಮೂಲಕ ಪೊಲೀಸ್ ಇಲಾಖೆಗೆ ಸವಾಲು ಎಸಗಿದ್ದಾರೆ. ಚುನಾವಣೆ ಸಂದರ್ಭ ಜನರಲ್ಲಿ ಮತೀಯ ಭಾವನೆ ಭಿತ್ತಿ ಅದರ ದುರ್ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಆ ಮೂಲಕ ಒಡೆದು ಆಳುವ ನೀತಿ ತಾಳುವ ಯಾರಿಗೂ ಸಮಾಜದಲ್ಲಿ ಮನ್ನಣೆ ಇಲ್ಲ ಎಂದು ತೋರಿಸಿಕೊಡಬೇಕಿದೆ ಎಂದು ಅಲಿ ಹಸನ್ ಒತ್ತಾಯಿಸಿದ್ದಾರೆ.
Next Story





