ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಿಲಾನ್ಯಾಸ

ಕೊಳ್ಳೇಗಾಲ,ಡಿ,4: ಪಟ್ಟಣದಲ್ಲಿ ವಿಶೇಷ ಅನುದಾನದ ಎಸ್‍ಸಿಪಿ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಎಸ್.ಜಯಣ್ಣ ಶಿಲಾನ್ಯಾಸ ನೇರೆವೇರಿಸಿದರು.
ನಂತರ ಮಾತನಾಡಿದ ಅವರು, ಭೀಮನಗರ ಬಡಾವಣೆಯ 4 ಮತ್ತು 3ನೇ ವಾರ್ಡ್‍ನಲ್ಲಿ ಎಸ್‍ಸಿಪಿ ಅನುದಾನದಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ ಹಾಗೂ ಈ ವಾರ್ಡ್‍ಗೆ ಮುಖ್ಯವಾಗಿ ಅಗತ್ಯ ಇರುವ ಹೈಟೆಕ್ ಸಾರ್ವಜನಿಕ ಶೌಚಾಲಯವನ್ನು ವಿಶೇಷ ಅನುದಾನದಲ್ಲಿ ಸದ್ಯದಲ್ಲೇ ಅಭಿವೃದ್ದಿ ಪಡಿಸಲಾಗುವುದು ಎಂದರು.
ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ 4 ತಿಂಗಳಲ್ಲಿ ಬಾಕಿ ಇರುವ ಎಲ್ಲಾ ರಸ್ತೆ ಅಭಿವೃದ್ದಿ ಕಾಮಾಗಾರಿಗಳನ್ನು ಪೂರ್ಣಗೊಳಿಲಾಗುವುದು ಎಂದ ಅವರು ರಸ್ತೆ ಕಾಮಾಗಾರಿಯಲ್ಲಿ ಗುಣ ಮಟ್ಟವನ್ನು ಕಾಪಾಡಿಕೊಳ್ಳಬೇಕು ರಸ್ತೆಗಳು ಗುಂಡಿ ಬೀಳದಂತೆ ಕೂಡಲೇ ಅದನ್ನು ಮುಚ್ಚುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಧಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಪೌರಾಯುಕ್ತ ಡಿ.ಕೆ.ಲಿಂಗರಾಜು, ಎಇಇ ಗಂಗಾಧರ್, ಇಂಜಿನಿಯರ್‍ಗಳಾದ ನಾಗೇಂದ್ರ, ನಟರಾಜು ಅಧ್ಯಕ್ಷ ಶಾಂತರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ ಸದಸ್ಯರಾದ ರಾಘವೇಂದ್ರ, ರಮೇಶ್, ಮಲ್ಲಿಕಾರ್ಜುನ್, ಮಹದೇವಿ, ಸುರೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮುಡಿಗುಂಡ ಶಾಂತರಾಜು, ಯಜಮಾನರುಗಳಾದ ಚಿಕ್ಕಮಾಳಿಗೆ ಸೋಮಶೇಖರ್, ರಾಜೇಂದ್ರ, ಆನಂದ, ಕೆ.ಜೆ.ಜವರಯ್ಯ, ಸಿದ್ದಾರ್ಥ, ಮುಖಂಡರುಗಳಾದ ಡಿ.ಸಿದ್ದರಾಜು, ಸೋಮು, ಮಂಜು, ರಾಜಪ್ಪ, ಲಿಂಗರಾಜು, ಬಸ್ತಿಪುರ ರವಿ, ಚಂದು, ವರದರಾಜು, ಕಿಜರ್, ಗುತ್ತಿಗೆದಾರ ಫೈರೋಜ್, ರಾಜೇಂದ್ರ ಹಾಗೂ ಇನ್ನೀತರರು ಹಾಜರಿದ್ದರು.







