‘ನಮ್ಮ ಗ್ರಾಮ - ನಮ್ಮ ಯೋಜನೆ’ ಸಂಶೋಧನಾ ಕಾರ್ಯಗಾರ

ಉಡುಪಿ, ಡಿ.4: ಜನ ಸಹಭಾಗಿತ್ವದ ಗ್ರಾಮೀಣ ಯೋಜನೆಗಳನ್ನು ತಯಾ ರಿಸುವಲ್ಲಿ ಉಡುಪಿ ಜಿಲ್ಲೆ ಸಾಕಷ್ಟು ಅನುಭವ ಹೊಂದಿದೆ. ಶಿಕ್ಷಣ ಹಾಗೂ ಜನರ ಅರಿವಿನ ಮಟ್ಟ ಗರಿಷ್ಠ ಪ್ರಮಾಣದಲ್ಲಿರುವುದರಿಂದ ‘ನಮ್ಮ ಗ್ರಾಮ-ನಮ್ಮ ಯೋಜನೆ’ಯಂತಹ ತಳ ಸ್ಪರ್ಶಿ ಯೋಜನೆಗಳನ್ನು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಸೃಜಿಸಿ, ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಎಂದು ಉಡುಪಿ ಜಿಪಂ ಮುಖ್ಯಯೋಜನಾಧಿಕಾರಿ ಎ.ಶ್ರೀನಿವಾಸ ರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ (ಪಿಐಎಂ)ದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ಆವರಣದಲ್ಲಿ ಆಯೋಜಿಸಲಾದ ‘ನಮ್ಮ ಗ್ರಾಮ-ನಮ್ಮ ಯೋಜನೆ’ ಸಂಶೋಧನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ನಾರಾಯಣ ಮಾತನಾಡಿ, ಹದಿನಾಲ್ಕನೆಯ ಹಣಕಾಸು ಆಯೋಗ ಸ್ಪಷ್ಟಪಡಿಸಿದ ಜನ ಸಹ ಭಾಗಿತ್ವದ ನಮ್ಮ ಗ್ರಾಮ- ನಮ್ಮ ಯೋಜನೆ ರಾಷ್ಟ್ರಾದ್ಯಂತ ಅನುಷ್ಠಾನಗೊಳ್ಳ ಬೇಕಾದ ಯೋಜನೆ. ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಈ ಯೋಜನೆಯ ತಯಾರಿ ಹಾಗೂ ಅನುಷ್ಠಾನ ಹೇಗೆ ಮಾಡಿದೆ ಎಂಬುದು ಅಧ್ಯಯನ ಯೋಗ್ಯ ವಿಚಾರ ಎಂದರು.
ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ಸಂಚಾಲಕ ಡಾ. ಕೃಷ್ಣ ಕೊತಾಯ ಸಂಶೋಧನೆಯ ವಿವರ ನೀಡಿದರು. ಪಿಐಎಂನ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಡಾ.ಎಂ.ಆರ್.ಹೆಗಡೆ ಮಾತನಾಡಿದರು.
ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ನಿರ್ದೇಶಕ ಡಾ. ಭರತ್ ವಿ. ಸ್ವಾಗತಿಸಿದರು. ಸಂಸ್ಥೆಯ ಯೋಜನಾಧಿಕಾರಿ ಶಶಾಂಕ ವಂದಿಸಿ ದರು. ಅಜಿೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕ ಶ್ಯಾಮ್ ಕಶ್ಯಪ್, ಉಡುಪಿ ಜಿಲ್ಲೆಯ ಆಯ್ದ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾ ಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದೇಶದ ಐದು ರಾಜ್ಯ ಗಳಿಂದ ಬಂದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.







