ರಾಜ್ಯಸ್ತರೀಯ ಸಂಸ್ಕೃತ ಶಾಸ್ತ್ರೀಯ ಸ್ಪರ್ಧೆಗಳ ಉದ್ಘಾಟನೆ

ಉಡುಪಿ, ಡಿ.4: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ವತಿಯಿಂದ 2017-18ನೆ ಸಾಲಿನ ರಾಜ್ಯಸ್ತರೀಯ ಸಂಸ್ಕೃತ ಶಾಸ್ತ್ರೀಯ ಸ್ಪರ್ಧೆಗಳ ಉದ್ಘಾ ಟನಾ ಸಮಾರಂಭವು ರವಿವಾರ ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಜರಗಿತು.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಆಯೋಜಿಸಲಾದ ಈ ಸ್ಪರ್ಧಾ ಕಾರ್ಯಕ್ರಮವನ್ನು ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ವಿದ್ವಾನ್ ಹರಿದಾಸ ಭಟ್ ಮಾತನಾಡಿದರು.
ಎಸ್‌ಎಂಎಸ್‌ಪಿ ಸಭಾದ ಕಾರ್ಯದರ್ಶಿ ರತ್ನಕುಮಾರ್, ಪ್ರಾಚಾರ್ಯ ಡಾ.ಎನ್.ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು. ಕರ್ನಾಟಕ ಸಂಸ್ಕೃತ ವಿವಿ ಪ್ರಶಾಸನ ಸಮಿತಿಯ ಪ್ರಮುಖ ಡಾ.ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶಿವಪ್ರಸಾದ ತಂತ್ರಿ ಕಾರ್ಯ ಕ್ರಮ ನಿರೂಪಿಸಿದರು. ಡಾ.ಷಣ್ಮುಖ ಹೆಬ್ಬಾರ್ ವಂದಿಸಿದರು.
Next Story





