ಪುತ್ತೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಸೇವಾ ಕೇಂದ್ರ ಉದ್ಘಾಟನೆ

ಪುತ್ತೂರು, ಡಿ. 4: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಸೇವಾ ಕೇಂದ್ರವೊಂದು ಪುತ್ತೂರಿನ ನೆಹರು ನಗರದಲ್ಲಿ ಇಂದು ಉದ್ಗಾಟನೆಗೊಂಡಿತು.
ಸೇವಾಕೇಂದ್ರ ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಸೇವಾ ಕೇಂದ್ರದಿಂದ ಎಲ್ಲರಿಗೂ ಪ್ರಯೋಜನವಾಗಲಿದೆ ಎಂದರು. ನಗರಸಭೆ ಸದಸ್ಯ ಜೀವಂದರ್ ಜೈನ್ ಅವರು ಮಾತನಾಡಿ ಸೇವಾ ಕೇಂದ್ರದಲ್ಲಿ ಕಾರ್ಯಕರ್ತರು ತಮ್ಮ ಸಮಯದ ವೇಳೆ ಹೊಂದಾಣಿಕೆಯೊಂದಿಗೆ ಸಾರ್ವಜನಿಕರಿಗೆ ಸೇವೆ ನೀಡಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಗೋಪಾಲಕ್ರಷ್ಣ ಹೇರಳೆ, ರಾಘವೇಂದ್ರ ಪ್ರಭು, ಯುವರಾಜ್, ಫಾರೂಕ್, ಅಶ್ರಫ್, ರಾಮ್ ದಾಸ್ ಹಾರಾಡಿ ಉಪಸ್ಥಿತರಿದ್ದರು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದಲ್ಲಿ, ಹೊಸದಾಗಿ ಹೆಸರು ಸೇರ್ಪಡೆಗೊಳಿಸುವ ಸೇವಾ ಕೇಂದ್ರವಾಗಿ ಇಲ್ಲಿ ಎಲ್ಲರಿಗೂ ಸೇವೆ ಸಿಗಲಿದೆ.
Next Story





