ಸೋಮವಾರಪೇಟೆಯಲ್ಲಿ ವನ್ಯಜೀವಿಗೆ ಕಾವಲುಗಾರ ಬಲಿ
ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ : ಅರಣ್ಯ ಇಲಾಖೆಯಿಂದ ಪರಿಹಾರ ವಿತರಣೆ

ಮಡಿಕೇರಿ,ಡಿ.4 :ಕಾಫಿ ತೋಟದ ಒಂಟಿ ಲೈನ್‍ಮನೆಯಲ್ಲಿ ವಾಸವಾಗಿದ್ದ ಕಾವಲುಗಾರರೊಬ್ಬರು ಕಾಡು ಪ್ರಾಣಿಯ ದಾಳಿಗೆ ಬಲಿಯಾಗಿರುವ ಘಟನೆ ಸೋಮವಾರಪೇಟೆ ಪಟ್ಟಣ ಸಮೀಪದ ನಗರೂರು ಎಸ್ಟೇಟ್‍ನಲ್ಲಿ ನಡೆದಿದೆ.
ನಗರೂರು ಕಲ್ಲುಬಂಗ್ಲೆ ನಿವಾಸಿ ತಿಮ್ಮಪ್ಪ(67) ಎಂಬುವವರೇ ಮೃತ ವ್ಯಕ್ತಿ. ಸಂತೋಷ್ ಎಂಬವರಿಗೆ ಸೇರಿದ ನಗರೂರು ಕಾಫಿ ತೋಟದಲ್ಲಿ ತಿಮ್ಮಪ್ಪ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಿದ ಸಂದರ್ಭ ತಿಮ್ಮಪ್ಪ ಅವರ ಮೃತದೇಹ ಕಂಡು ಬಂದಿದೆ.
ಸೂಕ್ತ ಪರಿಹಾರಕ್ಕಾಗಿ ಸುತ್ತಮುತ್ತಲ ಕಾರ್ಮಿಕರು ಹಾಗೂ ಸಾರ್ವಜನಿಕರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರ ಸೂಚನೆ ಮೇರೆಗೆ, ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ಘೋಷಿಸಿ, ಸ್ಥಳದಲ್ಲಿ 2 ಲಕ್ಷ ರೂ. ಚೆಕ್ ವಿತರಿಸಿದರು.
Next Story





