ಬಾಬಾಬುಡಾನ್ ಗಿರಿ : ಜಿಲ್ಲಾಡಳಿತದಿಂದ ಗೋರಿಗಳ ದುರಸ್ತಿ

ಚಿಕ್ಕಮಗಳೂರು, ಡಿ.4: ದತ್ತಜಯಂತಿ ಕೊನೆಯ ದಿನವಾದ ಡಿ.3ರ ರವಿವಾರ ದತ್ತ ಮಾಲಾಧಾರಿಗಳು ಭಘ್ನಗೊಳಿಸಲು ಯತ್ನಿಸಿದ್ದ ಕೆಲ ಗೋರಿಗಳನ್ನು ಜಿಲ್ಲಾಡಳಿತ ಸೋಮವಾರ ದುರಸ್ತಿಗೊಳಿಸಿದೆ.
ದತ್ತ ಜಯಂತಿ ವೇಳೆ ಗುಹೆಯೊಳಗೆ ತೆರಳಿದ ಕೆಲ ದತ್ತಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆದು ಹಿಂತಿರುಗುವ ಸಮಯದಲ್ಲಿ ನಿಷೇಧಿತ ಪ್ರದೇಶದೊಳಗೆ ನುಗ್ಗಿ ದಾಂದಲೆ ನಡೆಸಿದ್ದರು. ವಿವಾದಿತ ಸ್ಥಳದಲ್ಲಿ ಗೋರಿಗಳ ಮೇಲೆ ಕುಣಿದಾಡಿ ಗೋರಿಯ ಮೇಲಿನ ಕಲ್ಲುಗಳನ್ನು ಕಿತ್ತು ಹಾಕಲು ಯತ್ನಿಸಿ ಭಘ್ನಗೊಳಿಸಿದ್ದರು.
ಇಂದು ಬಾಬಾಬುಡಾನ್‌ಗಿರಿಗೆ ತೆರಳಿದ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಘ್ನಗೊಂಡಿದ್ದ ಗೋರಿಗಳನ್ನು ದುರಸ್ತಿಪಡಿಸುವ ಮೂಲಕ ಯಥಾಸ್ಥಿತಿಗೆ ತಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಉಂಟಾಗಿದ್ದ ಉಧ್ವಿಘ್ನ್ನ ಪರಿಸ್ಥಿತಿಯನ್ನು ಪೊಲೀಸ್ ಇಲಾಖೆ ಸಂಪೂರ್ಣ ಹತೋಟಿಗೆ ತರುವ ಜೊತೆಗೆ ಕಟ್ಟೆಚ್ಚರ ವಹಿಸಿದೆ.
Next Story





