ವಾಶಿಂಗ್ಟನ್: ಸ್ಕೂಬಾ ಡೈವಿಂಗ್ ಮಾಡುತ್ತಿದ್ದ ಮಹಿಳೆ ಶಾರ್ಕ್ ದಾಳಿಗೆ ಬಲಿ
ಭಾರತ ಮೂಲದ ರೊಹೀನಾ ಭಂಡಾರಿ ಮೃತ್ಯು

ವಾಶಿಂಗ್ಟನ್, ಡಿ. 4: ಕೋಸ್ಟರಿಕದ ದ್ವೀಪವೊಂದರಲ್ಲಿ ಕಳೆದ ವಾರ ಸ್ಕೂಬಾ ಡೈವಿಂಗ್ ಮಾಡುತ್ತಿದ್ದ ಭಾರತ ಮೂಲದ ಮಹಿಳೆಯೊಬ್ಬರು ಶಾರ್ಕ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
49 ವರ್ಷದ ರೊಹೀನಾ ಭಂಡಾರಿ ನ್ಯೂಯಾರ್ಕ್ ನಗರದಲ್ಲಿ ಖಾಸಗಿ ಹಣಕಾಸು ಪೂರೈಕೆ ವ್ಯವಹಾರ ನಡೆಸುತ್ತಿದ್ದರು. ಅವರು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಸ್ಥಾಪಿಸಿದ ಹಣಕಾಸು ಸಂಸ್ಥೆಯೊಂದರ ಹಿರಿಯ ನಿರ್ದೇಶಕಿಯಾಗಿದ್ದರು.
ಕೋಸ್ಟರಿಕದ ಸಮುದ್ರದಲ್ಲಿ 482 ಕಿ.ಮೀ. ದೂರದಲ್ಲಿರುವ ಕೊಕೊಸ್ ದ್ವೀಪದ ಸಮೀಪ ಅವರು ಸಂಗಡಿಗರ ಜೊತೆ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ರವಿವಾರ ವರದಿ ಮಾಡಿದೆ.
ಶಾರ್ಕ್ ದಾಳಿಯಲ್ಲಿ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು.
ಅವರನ್ನು ಉಳಿಸಲು ಅವರೊಂದಿಗೆ ಹೋಗಿದ್ದ ವೈದ್ಯರ ತಂಡ ಪ್ರಯತ್ನಗಳನ್ನು ನಡೆಸಿತಾದರೂ ಅವರ ಗಾಯಗಳು ಗಂಭೀರವಾಗಿದ್ದವು ಎಂದು ವರದಿ ತಿಳಿಸಿದೆ.
Next Story





