ಲಂಡನ್: ವಿಜಯ ಮಲ್ಯ ಗಡಿಪಾರು ವಿಚಾರಣೆ ಆರಂಭ

ಲಂಡನ್, ಡಿ. 4: ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರ ಗಡಿಪಾರು ವಿಚಾರಣೆ ಸೋಮವಾರ ಇಲ್ಲಿನ ನ್ಯಾಯಾಲಯವೊಂದರಲ್ಲಿ ಆರಂಭವಾಗಿದೆ.
ಮದ್ಯದ ದೊರೆಯನ್ನು ಗಡಿಪಾರು ಮಾಡುವಂತೆ ಕೋರಿ ಭಾರತ ಸಲ್ಲಿಸಿರುವ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ಎಂಟು ದಿನಗಳ ಕಾಲ ಅಂದರೆ ಡಿಸೆಂಬರ್ 14ರವರೆಗೆ ನಡೆಯಲಿದೆ. ಬಳಿಕ ತೀರ್ಪಿನ ದಿನಾಂಕವನ್ನು ಘೋಷಿಸಲಾಗುವುದು.
ಮಲ್ಯರ ಕಾನೂನು ತಂಡವು ನ್ಯಾಯಾಲಯಕ್ಕೆ ಪುರಾವೆಗಳನ್ನೊಳಗೊಂಡ ನಾಲ್ಕು ದೊಡ್ಡ ಪೆಟ್ಟಿಗೆಗಳನ್ನು ತಂದಿದೆ.
ಪ್ರಕರಣವನ್ನು ನಡೆಸುತ್ತಿರುವ ಸಿಬಿಐಯ ನಾಲ್ವರು ಸದಸ್ಯರ ತಂಡ ನ್ಯಾಯಾಲಯದಲ್ಲಿ ಹಾಜರಿತ್ತು.
ವಿಚಾರಣೆಯ ಆರಂಭದಲ್ಲಿ ಬೆಂಕಿ ಅಪಾಯವನ್ನು ಸೂಚಿಸುವ ಸೈರನ್ ತಪ್ಪಾಗಿ ಮೊಳಗಿತ್ತು. ಹಾಗಾಗಿ, ನ್ಯಾಯಾಲಯವನ್ನು ತೆರವುಗೊಳಿಸಲಾಯಿತು. 40 ನಿಮಿಷಗಳ ಬಳಿಕ ನ್ಯಾಯಾಲಯ ಪುನಾರಂಭಗೊಂಡಿತು.
ಮಲ್ಯ ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಪಾವತಿಸಬೇಕಾಗಿದೆ.
Next Story





