Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅದಾನಿ ಕಲ್ಲಿದ್ದಲು ಗಣಿಗೆ ಸಾಲ ನೀಡಲು...

ಅದಾನಿ ಕಲ್ಲಿದ್ದಲು ಗಣಿಗೆ ಸಾಲ ನೀಡಲು ಚೀನಾ ಬ್ಯಾಂಕ್‌ಗಳ ನಕಾರ

ವಾರ್ತಾಭಾರತಿವಾರ್ತಾಭಾರತಿ4 Dec 2017 10:15 PM IST
share
ಅದಾನಿ ಕಲ್ಲಿದ್ದಲು ಗಣಿಗೆ ಸಾಲ ನೀಡಲು ಚೀನಾ ಬ್ಯಾಂಕ್‌ಗಳ ನಕಾರ

ಮೆಲ್ಬರ್ನ್, ಡಿ. 4: ಭಾರತೀಯ ಇಂಧನ ಉದ್ದಿಮೆಯ ದೈತ್ಯ ಅದಾನಿ ಆಸ್ಟ್ರೇಲಿಯದಲ್ಲಿ ವಹಿಸಿಕೊಂಡಿರುವ ಕಾರ್ಮಿಕೇಲ್ ಕಲ್ಲಿದ್ದಲು ಗಣಿ ಯೋಜನೆಗೆ ಇನ್ನೊಂದು ವಿಘ್ನ ಎದುರಾಗಿದೆ. ಯೋಜನೆಗೆ ಆರ್ಥಿಕ ನೆರವು ನೀಡುವ ಉದ್ದೇಶ ತಮಗಿಲ್ಲ ಎಂಬುದಾಗಿ ಚೀನಾದ ಎರಡು ಪ್ರಮುಖ ಸರಕಾರಿ ಬ್ಯಾಂಕ್‌ಗಳು ಹೇಳಿರುವುದಾಗಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಜಗತ್ತಿನ ಅತ್ಯಂತ ದೊಡ್ಡ ಕಲ್ಲಿದ್ದಲು ಗಣಿ ಯೋಜನೆಗಳ ಪೈಕಿ ಒಂದಾಗಿರುವ 16.5 ಬಿಲಿಯ ಆಸ್ಟ್ರೇಲಿಯ ಡಾಲರ್ (80,904 ಕೋಟಿ ರೂಪಾಯಿ) ವೆಚ್ಚದ ಕಾರ್ಮಿಕೇಲ್ ಕಲ್ಲಿದ್ದಲು ಗಣಿ ಯೋಜನೆಯು ಆಸ್ಟ್ರೇಲಿಯದ ಕೇಂದ್ರ ಮತ್ತು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರಕಾರಗಳು ಅನುಮೋದನೆ ನೀಡಿದ ಬಳಿಕ ನಿರ್ಮಾಣ ಕಾರ್ಯ ಆರಂಭಿಸಲಿದೆ.

 ಕ್ವೀನ್ಸ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಯೋಜನೆಯ ಪ್ರಥಮ ಹಂತಕ್ಕೆ ಅದಾನಿ ಗುಂಪು 2018 ಮಾರ್ಚ್ ವೇಳೆಗೆ 2 ಬಿಲಿಯ ಆಸ್ಟ್ರೇಲಿಯ ಡಾಲರ್ (9,806 ಕೋಟಿ ರೂಪಾಯಿ) ನೆರವು ನಿರೀಕ್ಷಿಸುತ್ತಿದೆ.

ಅದಾನಿಯ ಪ್ರಸ್ತಾಪಿತ ಕ್ವೀನ್ಸ್‌ಲ್ಯಾಂಡ್ ಕಲ್ಲಿದ್ದಲು ಗಣಿಗೆ ಹಣಕಾಸು ಪೂರೈಸುವ ಉದ್ದೇಶ ತನಗಿಲ್ಲ ಎಂದು ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಶಿಯಲ್ ಬ್ಯಾಂಕ್ ಆಫ್ ಚೀನಾ (ಐಸಿಬಿಸಿ) ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.

  ‘‘ಐಸಿಬಿಸಿ ತನ್ನ ಸಾಮಾಜಿಕ ಜವಾಬ್ದಾರಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ ಹಾಗೂ ಹಸಿರು (ಪರಿಸರ ಸ್ನೇಹಿ) ಯೋಜನೆಗಳಿಗೆ ಬೆಂಬಲ ನೀಡಲು ಬಯಸುತ್ತದೆ’’ ಎಂದು ಐಸಿಬಿಸಿ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ, ಚೀನಾ ಕನ್‌ಸ್ಟ್ರಕ್ಷನ್ ಬ್ಯಾಂಕ್ ಕೂಡ ಯೋಜನೆಗೆ ಸಾಲ ನೀಡಲು ನಿರಾಕರಿಸಿತ್ತು.

‘‘ಅದಾನಿ ಕಾರ್ಮಿಕೇಲ್ ಗಣಿ ಯೋಜನೆಯಲ್ಲಿ ತಾನು ಭಾಗಿಯಾಗಿಲ್ಲ ಹಾಗೂ ಭಾಗಿಯಾಗುವ ಬಗ್ಗೆ ಪರಿಶೀಲನೆಯನ್ನೂ ನಡೆಸಿಲ್ಲ’’ ಎಂದು ವರದಿ ಹೇಳಿದೆ.

ಕ್ವೀನ್ಸ್‌ಲ್ಯಾಂಡ್ ಸರಕಾರವೂ ಯೋಜನೆಗೆ ವಿರುದ್ಧ

ಲೇಬರ್ ಪಾರ್ಟಿ ಅಧಿಕಾರದಲ್ಲಿರುವ ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರಕಾರವೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.

ಪರಿಸರವಾದಿಗಳು ಮತ್ತು ಬುಡಕಟ್ಟು ಜನರು ವಿರೋಧಿಸುತ್ತಿರುವ ಯೋಜನೆಗೆ ಆರ್ಥಿಕ ನೆರವು ಲಭಿಸದಂತೆ ವೀಟೊ ಚಲಾಯಿಸುವುದಾಗಿ ಅದು ಹೇಳಿದೆ.

ಮಧ್ಯ ಕ್ವೀನ್ಸ್‌ಲ್ಯಾಂಡ್‌ನ ಗಲಿಲೀ ಜಲಾನಯನ ಪ್ರದೇಶದಲ್ಲಿರುವ ಕಾರ್ಮಿಕೇಲ್ ಕಲ್ಲಿದ್ದಲು ಗಣಿಯನ್ನು ಖರೀದಿಸುವುದರೊಂದಿಗೆ ಅದಾನಿ ಗುಂಪು 2010ರಲ್ಲಿ ಆಸ್ಟ್ರೇಲಿಯಕ್ಕೆ ಕಾಲಿಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X