ಉಡುಪಿ: ನಿವೃತ್ತರಿಗೆ ಬೀಳ್ಕೋಡುಗೆ

ಉಡುಪಿ, ಡಿ.4: ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಗಳ ಕಚೇರಿಯಲ್ಲಿ ಹಿರಿಯ ಬೆರಳಚ್ಚುಗಾರರಾಗಿದ್ದ ಮೀರಾ, ಇಲಾಖೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದು, ಅವರಿಗೆ ಕಚೇರಿಯ ಸಿಬ್ಬಂದಿಗಳು ಶುಭ ಹಾರೈಸಿ ಬೀಳ್ಕೊಟ್ಟರು.
ಮೀರಾ ಇವರಿಗೆ ಶಾಲು ಹೊದಿಸಿ, ಫಲ-ಪುಷ್ಪ, ಸ್ಮರಣಿಕೆಗಳನ್ನು ನೀಡಿ ಗೌರವಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಯೋಜನಾ ಸಮನ್ವಯಾಧಿ ಕಾರಿ ಲಲಿತಾಬಾಯಿ ಎಲ್ ಮತ್ತು ಐಟಿಡಿಪಿ, ಸಮಾಜ ಕಲ್ಯಾಣ ಹಾಗೂ ಬಿಎಂಸಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
Next Story





