ಕಿವೀಸ್‌ಗೆ ಭರ್ಜರಿ ಜಯ
ಮೊದಲ ಟೆಸ್ಟ್

ವೆಲ್ಲಿಂಗ್ಟನ್, ಡಿ.4: ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ ್ಟಇಂಡೀಸ್ ತಂಡ ದಿಢೀರ್ ಕುಸಿತ ಕಂಡ ಕಾರಣ ಆತಿಥೇಯ ನ್ಯೂಝಿಲೆಂಡ್ ತಂಡ ಇನಿಂಗ್ಸ್ ಹಾಗೂ 67 ರನ್‌ಗಳಿಂದ ಜಯ ಸಾಧಿಸಿದೆ. ನಾಲ್ಕನೆ ದಿನವಾದ ಸೋಮವಾರ ಲಂಚ್ ವಿರಾಮದ ಬಳಿಕ ವಿಂಡೀಸ್ 9 ಓವರ್‌ಗಳಲ್ಲಿ ಕೇವಲ 33 ರನ್ ಸೇರಿಸುವಷ್ಟರಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ನ್ಯೂಝಿಲೆಂಡ್ ಇನ್ನೂ ಒಂದು ದಿನದ ಆಟಗಾರ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ನಾಲ್ಕನೇ ದಿನವಾದ ಸೋಮವಾರ 2 ವಿಕೆಟ್‌ಗಳ ನಷ್ಟಕ್ಕೆ 214 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ 319 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯವಾಗಿ ಸೋತಿತು.
ವಿಂಡೀಸ್‌ನ ಪರ ಆರಂಭಿಕ ಆಟಗಾರ ಕ್ರೆಗ್ ಬ್ರಾತ್‌ವೇಟ್ ಸರ್ವಾಧಿಕ ಸ್ಕೋರ್(91,221 ಎಸೆತ,8 ಬೌಂಡರಿ,1 ಸಿಕ್ಸರ್) ಗಳಿಸಿದರು.ಶಿಮ್ರೋನ್ ಹೆಟ್ಮೆಯರ್(66), ಕೀರನ್ ಪೊವೆಲ್(40), ಶೈ ಹೋಪ್(37), ರಾಸ್ಟನ್ ಚೇಸ್(18) ಹಾಗೂ ಸುನೀಲ್ ಅಂಬ್ರಿಸ್ 18 ರನ್ ಗಳಿಸಿದರು. ಅಗ್ರ ಕ್ರಮಾಂಕದಲ್ಲಿ ಬ್ರಾತ್‌ವೇಟ್, ಪೊವೆಲ್, ಹೆಟ್ಮೆಯರ್ ಹಾಗೂ ಹೋಪ್ ಉತ್ತಮ ಬ್ಯಾಟಿಂಗ್ ಮಾಡಿದ್ದರೂ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್‌ಗಳು ಕೈಕೊಟ್ಟರು. ನ್ಯೂಝಿಲೆಂಡ್ ಪರ ಮ್ಯಾಟ್ ಹೆನ್ರಿ(3-57) ಯಶಸ್ವಿ ಬೌಲರ್ ಎನಿಸಿಕೊಂಡರೆ, ಟ್ರೆಂಟ್ ಬೌಲ್ಟ್(2-87), ಗ್ರಾಂಡ್‌ಹೋಮ್(2-40) ಹಾಗೂ ವ್ಯಾಗ್ನೆರ್(2-102) ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಟಾಸ್ ಜಯಿಸಿದ ಕಿವೀಸ್ ತಂಡ ಪ್ರವಾಸಿ ವಿಂಡೀಸ್‌ನ್ನು ಬ್ಯಾಟಿಂಗ್‌ಗೆ ಇಳಿಸಿ ಕೇವಲ 134 ರನ್‌ಗೆ ಕಟ್ಟಿಹಾಕಿತ್ತು. ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 520 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
►ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 134
►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 520/9 ಡಿಕ್ಲೇರ್
►ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್:319 ರನ್‌ಗೆ ಆಲೌಟ್
(ಕ್ರೆಗ್ ಬ್ರಾತ್‌ವೇಟ್ 91, ಶಿಮ್ರಾನ್ ಹೆಟ್ಮೆಯರ್ 66, ಕಿರೊನ್ ಪೊವೆಲ್ 40, ಶೈ ಹೋಪ್ 37, ಹೆನ್ರಿ 3-57, ಬೌಲ್ಟ್ 2-87, ಗ್ರಾಂಡ್‌ಹೋಮ್ 2-40, ವ್ಯಾಗ್ನೆರ್ 2-102).







