ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ: ಭಾರತಕ್ಕೆ ಸೋಲು
ಭುವನೇಶ್ವರ, ಡಿ.4: ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಜರ್ಮನಿ ವಿರುದ್ಧ 0-2 ಅಂತರದಿಂದ ಸೋತಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ.
ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಜರ್ಮನಿಯ ಪರ ಮಾರ್ಟಿನ್ ಹ್ಯಾನರ್(17ನೇ ನಿಮಿಷ) ಹಾಗೂ ಮ್ಯಾಟ್ಸ್ ಗ್ರಾಮ್ ಬುಚ್(20ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಮೊದಲಾರ್ಧದಲ್ಲಿ ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಭಾರತ ಹಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.
ಒಂದು ಪಂದ್ಯದಲ್ಲಿ ಡ್ರಾ, ಎರಡರಲ್ಲಿ ಸೋತಿರುವ ಭಾರತ ‘ಬಿ’ ಗುಂಪಿನಲ್ಲಿ ಕೇವಲ ಒಂದು ಅಂಕ ಗಳಿಸಿದೆ. ಭಾರತದ ಆಟಗಾರ ಲಲಿತ್ ಉಪಾಧ್ಯಾಯ 50ನೇ ಪಂದ್ಯವನ್ನು ಆಡಿ ಹೊಸ ಮೈಲುಗಲ್ಲು ತಲುಪಿದರು.
Next Story





