ಸರ್ಕಾರದ ಸೌಲಭ್ಯ ಪಡೆದು ಬದುಕು ಕಟ್ಟಿಕೊಳ್ಳಿ : ಸತ್ರ ನ್ಯಾಯಾಧೀಶ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಕರೆ

ಮಡಿಕೇರಿ ಡಿ. 5 :ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆದು ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು ಹೇಳಿದರು.
ನಗರದ ಓಂಕಾರ ಸದನದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಕಲಚೇತನರಿಗೆ ಮಾಸಶಾಸನ, ಉಚಿತ ಬಸ್‍ಪಾಸ್, ಸಾಲ ಸೌಲಭ್ಯ, ವಸತಿ ಯೋಜನೆ ಹಾಗೆಯೇ ಸಾರ್ವಜನಿಕ ಸೇವೆ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಉದ್ಯೋಗದಲ್ಲಿ ಶೇ.3 ರಷ್ಟು ಮಿಸಲಾತಿ ಹೊಂದಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು ತಿಳಿಸಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಮಾತನಾಡಿ ವಿಕಲಚೇತನರಾದ ಮಕ್ಕಳನ್ನು ಸಂಘ ಸಂಸ್ಥೆಗಳು ಪೋಷಿಸುತ್ತಿರುವುದು ಹೆಮ್ಮೆಯ ವಿಷಯ. ಅಂಗವಿಕಲರ ನೋವಿಗೆ ವೈದ್ಯರು ಸ್ಪಂದಿಸಬೇಕು. ಪ್ರತಿಯೊಬ್ಬರೂ ಅಂಗವಿಕಲ ಮಕ್ಕಳಿಗೆ ಸಾಧನೆ ಮಾಡಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.
ವಿಕಲಚೇತನರು ಶಾರೀರಿಕವಾಗಿ ಹೊರತು ಮಾನಸಿಕವಾಗಿಯಲ.್ಲ ಕಣ್ಣಿರುವ ನಾವೇ ಕಷ್ಟಪಡುತ್ತೇವೆ. ಕಣ್ಣಿಲ್ಲದ ಎಷ್ಟೋ ಮಂದಿ ಸಾಧನೆ ಮಾಡಿದ್ದಾರೆ. ಆತ್ಮಸ್ಥೈರ್ಯವಿದ್ದರೆ ಏನು ಬೇಕಾದರೂ ಮಾಡಬಹುದು. ಗುರಿ ಇರಲಿ ಮಕ್ಕಳೇ ನಿಮ್ಮ ಬದುಕಲಿ ನ್ಯೂನ್ಯತೆ ಬದಿಗಿಟ್ಟು ಮಾನಸಿಕವಾಗಿ ಬದುಕಿ ಎಂದು ಅವರು ಸಲಹೆ ಮಾಡಿದರು.
ಕರ್ನಾಟಕ ರೇಷ್ಮೆ ಮಾರಟ ಮಂಡಳಿ ಅಧ್ಯಕ್ಷರಾದ ಟಿ.ಪಿ ರಮೇಶ್ ಅವರು ಮಾತನಾಡಿ ವಿಕಲತೆ ಹೊಂದಿಯೂ ಸಹ ಹಲವರು ಅನೇಕ ಸಾಧನೆ ಮಾಡಿದ್ದಾರೆ. ವಿಕಲಚೇತನರಿಗೆ ಇದು ಮಾದರಿ ಎಂದು ಅವರು ತಿಳಿಸಿದರು.
ವಿಕಲಚೇತನರು ಯಾತನೆಪಡುವ ಬದಲು ಅವರಿಗೆ ದಾರಿದೀಪವಾಗಿ ಉತ್ತಮ ಸಮಾಜ ನಿರ್ಮಾಣ ಮಾಡಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಿ. ವಿಕಲಚೇತನರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ. ಅವರಿಗೆ ನಾವುಗಳು ಜೊತೆಗೂಡಿ ಸಹಕಾರ ನೀಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ ಕುಮಾರ್ ಅವರು ಮಾತನಾಡಿ ದೇಹಕ್ಕೆ ಮಾತ್ರ ಚೇತನ ಮನಸ್ಸಿಗಲ್ಲ. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು ವಾಹನ ನಿಲ್ದಾಣ ಮತ್ತು ಬಸ್ಸಿನಲ್ಲಿ ಕಾಯ್ದಿರಿಸಿದ ಸೀಟುಗಳು ಇವರಿಗೆ ಸಿಗಬೇಕು. ಅಂಗವಿಕಲತೆ ಶೇ.80 ರಷ್ಟು ಇದ್ದರೆ ಸರ್ಕಾರದ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದರು.
ಕೈ ಕಾಲು ಇಲ್ಲದಿದ್ದರೂ ಪರವಾಗಿಲ್ಲ ಗುರಿ ಇರಬೇಕು, ಗುರಿ ಹಿಂದೆ ಯೋಜನೆ ಇರಬೇಕು. ನಾವು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಸಮಾಜದಲ್ಲಿ ವಿಕಲಚೇತನರ ಪ್ರತಿಭೆ ಗುರುತಿಸಿ ಜಗತ್ತಿಗೆ ತೋರಿಸಬೇಕು. ಹೆಚ್ಚಿನ ಗೌರವಧನ ನೀಡುವಂತಾಗಬೇಕು ಎಂದು ಜಿ.ಪಂ.ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ವಿಜು ಸುಬ್ರಮಣಿ ತಿಳಿಸಿದರು.
ತಂದೆ ತಾಯಿಗಳು ವಿಕಲಚೇತನ ಮಕ್ಕಳ್ಳಿಗೆ ಸಹಾಯ ಮಾಡಬೇಕು. ಅವರು ಮನಸ್ಥೈರ್ಯ ಗುಂದದೆ ಯಶಸ್ವಿ ಕಾಣಬೇಕು. ಅವರಿಗೆ ಪ್ರೋತ್ಸಾಹ ನೀಡಿದರೆ ಉತ್ತಮ ಬೆಳಕಾಗಿ ಹೊರ ಬರುತ್ತಾರೆ. ನಾಲ್ಕು ಗೋಡೆ ಮಧ್ಯೆ ಇರದೇ ಹೊರ ಪ್ರಪಂಚಕ್ಕೆ ಪರಿಚಯಿಸಿ ಎಂದು ಅವರು ಹೇಳಿದರು.
ವಕೀಲರಾದ ವೈ.ಮನೋಜ್ ಬೋಪಯ್ಯ ಅವರು ಮಾತನಾಡಿ ಕಾನೂನು ಬಗ್ಗೆ ಅರಿವು ವಿಕಲಚೇತನರಿಗೆ ಸಮಾಜದ ಅವಿಭಾಜ್ಯ ಅಂಗವಾದ್ದರಿಂದ ತಿಳಿದುಕೊಳ್ಳಬೇಕು. ವಿಕಲಚೇತನ ಮಕ್ಕಳು ಹಕ್ಕಿಯಂತೆ ಹಾರುವ ಕನಸು ಕಾಣಬೇಕು ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ವಿಕಲಚೇತನರು ಪಡೆದುಕೊಳ್ಳಬೇಕು. ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕ ರಹದಾರಿ ಮಾಡಬೇಕು. ನಿಮಗೆ ಹಕ್ಕುಗಳು ಬಹಳ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುಮ್ತಾಜ್ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‍ಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಟಿ.ಪಿ.ದೇವರಾಜ್, ಚಿಗುರು ವಿಕಲ ಚೇತನರ ಸಂಘದ ಅಧ್ಯಕ್ಷರಾದ ಮಹೇಶ್ ಇತರರು ಹಾಜರಿದ್ದರು.







