ಮಂಗಳೂರು: ಡಿ.6ರಿಂದ ಎಸೆಸೆಲ್ಸಿ ಪಾಠ ಸರಣಿ
ಮಂಗಳೂರು, ಡಿ.5: ಮಂಗಳೂರು ಆಕಾಶವಾಣಿ ಕೇಂದ್ರವು ಸಿದ್ಧಪಡಿಸಿದ ‘ಬಾನುಲಿ ಶಾಲೆ’ ಎಸೆಸೆಲ್ಸಿ ವಿದ್ಯಾರ್ಥಿಗಳ ಪಾಠ ಸರಣಿ ಡಿ.6ರಿಂದ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪೂರ್ವಾಹ್ನ 11 ರಿಂದ 11:30ರವರೆಗೆ ಪ್ರಸಾರಗೊಳ್ಳಲಿದೆ. ಈ ಕಾರ್ಯಕ್ರಮ ಮೈಸೂರು ಹಾಗೂ ಧಾರವಾಡ ಕೇಂದ್ರಗಳಿಂದಲೂ ಈ ಸಮಯಕ್ಕೆ ಸಹ ಪ್ರಸಾರವಾಗುತ್ತದೆ.
ಎಸೆಸೆಲ್ಸಿಯ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಪಾಠ ಮಾಲಿಕೆಯ ಈ ಸರಣಿಯಲ್ಲಿ ದ.ಕ.ಜಿಲ್ಲೆಯ ಸರಕಾರಿ ಶಾಲೆಯ 21 ಶಿಕ್ಷಕರು ಪಾಲ್ಗೊಳ್ಳುತ್ತಿದ್ದಾರೆ. ಪರೀಕ್ಷೆಗೆ ಪಾಠವನ್ನು ಹೇಳಿಕೊಡುವ ಮತ್ತು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು 42 ಪಾಠಮಾಲಿಕೆಯಲ್ಲಿ ವಿವರಿಸುವ ಸರಣಿಯನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರೇಡಿಯೋ ಕೇಳಿಸುವ ಮೂಲಕ ವ್ಯವಸ್ಥೆ ಮಾಡಲಾಗಿದೆ.
Next Story





