ಬಾಬಾ ಬುಡನ್‌ಗಿರಿ ವಿವಾದ: ಮುಸ್ಲಿಂ ಲೀಗ್ ಮನವಿ

ಮಂಗಳೂರು, ಡಿ.5: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ ದರ್ಗಾದ ಗೋರಿಗಳನ್ನು ಧ್ವಂಸಗೊಳಿಸಲು ಯತ್ನಿಸಿದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಬೇಕು ಮತ್ತು ಗೋರಿಗಳನ್ನು ಪುನಃ ನಿರ್ಮಿಸಬೇಕು ಹಾಗೂ ಇದರ ವೆಚ್ಚವನ್ನು ಆರೋಪಿಗಳಿಂದ ಭರಿಸಲು ನ್ಯಾಯಾಲಯ ಆದೇಶಿಸಬೇಕು ಎಂದು ಮುಸ್ಲಿಂ ಲೀಗ್‌ನ ನಿಯೋಗ ದ.ಕ.ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಿತು.
ಲೀಗ್‌ನ ರಾಜ್ಯ ಉಪಾಧ್ಯಕ್ಷ ಸಿ. ಅಹ್ಮದ್ ಜಮಾಲ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಇಸ್ಮಾಯೀಲ್, ಮುಖಂಡರಾದ ರಿಯಾಝ್ ಹರೇಕಳ, ಹಾಜಿ ಅಬ್ದುಲ್ ರಹ್ಮಾನ್, ಎಂ.ಕೆ. ಅಶ್ರಫ್ ನಿಯೋಗದಲ್ಲಿದ್ದರು.
Next Story





