ಜಿಎಸ್‌ಟಿ ಪರಿಣಾಮ: ಕುಸಿದ ಸೇವಾ ಕ್ಷೇತ್ರ
ಮೂರು ತಿಂಗಳಲ್ಲೇ ಕಡಿಮೆ ದರ ತಲುಪಿದ ಪಿಎಂಐ

ಹೊಸದಿಲ್ಲಿ, ಡಿ.5: ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನದ ನಂತರ ನವೆಂಬರ್ ತಿಂಗಳಲ್ಲಿ ಕಡಿಮೆ ಬೇಡಿಕೆಯಿಂದಾಗಿ ಸೇವಾ ಕ್ಷೇತ್ರವು ಕಳಪೆ ಸಾಧನೆ ಮಾಡಿರುವುದಾಗಿ ಅಂಕಿಅಂಶಗಳು ತಿಳಿಸಿವೆ.
ನವೆಂಬರ್‌ನಲ್ಲಿ 50.0ರ ನೋ-ಚೇಂಜ್ ಮಟ್ಟದಿಂದ ಕೆಳಗಿನ ದರವನ್ನು ಸಾಧಿಸಿರುವ ವ್ಯವಹಾರ ಚಟುವಟಿಕೆ ಸೂಚ್ಯಂಕವು ಮೂರು ತಿಂಗಳಲ್ಲೇ ಮೊದಲ ಬಾರಿ ಸೇವಾ ಕ್ಷೇತ್ರವು ಕುಗ್ಗಿರುವ ಸೂಚನೆ ನೀಡಿದೆ. ಖಾಸಗಿ ಅಡಮಾನ ವಿಮೆ (ಪಿಎಂಐ)ಯ ಪ್ರಕಾರ 50 ಮೇಲಿನ ದರವು ಹಿಗ್ಗುವಿಕೆಯನ್ನು ಮತ್ತು ಅದಕ್ಕಿಂತ ಕೆಳಗಿನ ದರ ಕುಗ್ಗುವಿಕೆಯನ್ನು ಸೂಚಿಸುತ್ತದೆ.
ಬೇಡಿಕೆಯ ಅನನುಕೂಲ ಪರಿಸ್ಥಿತಿಯ ಹೊರತಾಗಿಯೂ ಕಳೆದ ಜುಲೈಯಿಂದ ಮುಂದಿನ 12 ತಿಂಗಳು ಸೇವಾ ಕ್ಷೇತ್ರದಲ್ಲಿ ವ್ಯವಹಾರ ಮನೋಭಾವದ ಮಟ್ಟವು ಹೆಚ್ಚಿರುವ ಕಾರಣ ಸೇವೆ ಪೂರೈಕೆದಾರರು ತಮ್ಮ ಸಿಬ್ಬಂದಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ.
ಪ್ರಸ್ತುತ ಸೇವಾ ಪಿಎಂಐಯು ಡಿಸೆಂಬರ್ ಒಂದರ ಉತ್ಪಾದನಾ ದರವನ್ನು ಅವಲಂಬಿಸಿದ್ದು ಇದರ ಪ್ರಕಾರ ನವೆಂಬರ್‌ನಲ್ಲಿ ಉತ್ಪಾದನಾ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. ನಿಕ್ಕಿ ಸಂಯುಕ್ತ ಪ್ರತಿಫಲ ಸೂಚ್ಯಂಕದ ಪ್ರಕಾರ ಉತ್ಪಾದನಾ ಮತ್ತು ಸೇವಾ ಚಟುವಟಿಕೆಯು ಅಕ್ಟೋಬರ್‌ನಲ್ಲಿ 51.3 ಇದ್ದರೆ ನವೆಂಬರ್ ವೇಳೆಗೆ 50.3ಕ್ಕೆ ಇಳಿದಿದೆ. ಇದು ಭಾರತದಲ್ಲಿ ಖಾಸಗಿ ಕ್ಷೇತ್ರದ ಉತ್ಪಾದನೆಯಲ್ಲಿ ನಿಶ್ಚಲತೆಯನ್ನು ಸೂಚಿಸುತ್ತದೆ.
ಆಗಸ್ಟ್‌ನಲ್ಲಿ ಸೆಂಟ್ರಲ್ ಬ್ಯಾಂಕ್ ಪ್ರಮುಖ ಸಾಲದ ದರವನ್ನು 0.25 ಶೇಕಡಾ ಅಂಕದಿಂದ 6 ಶೇಕಡಾಕ್ಕೆ ಇಳಿಸಿತ್ತು. ಇದು ಆರು ವರ್ಷಗಳಲ್ಲೇ ಕಡಿಮೆ ದರವಾಗಿದೆ.







