ರಾಜ್ಯಪಾಲರ ಕ್ರಮ ದಲಿತ ವಿರೋಧಿ: ದಸಂಸ ಆರೋಪ
ಭಡ್ತಿ ಮೀಸಲಾತಿ ಸಂರಕ್ಷಣಾ ಮಸೂದೆ

ಬೆಂಗಳೂರು, ಡಿ. 5: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರಕಾರಿ ನೌಕರರ ಭಡ್ತಿ ಮೀಸಲಾತಿ ಸಂರಕ್ಷಣಾ(ಸೇವಾ ಜೇಷ್ಠತೆ) ಮಸೂದೆಗೆ ವಿಧಾನ ಮಂಡಲ ಸರ್ವಾನುಮತದ ಅಂಗೀಕಾರ ನೀಡಿದ್ದು, ಅದಕ್ಕೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿರುವುದು ಕರ್ತವ್ಯ ಲೋಪ-ದಲಿತ ವಿರೋಧಿ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಬೆಳಗಾವಿ ಅಧಿವೇಶನದಲ್ಲಿ ಎಸ್ಸಿ-ಎಸ್ಟಿ ಸೇವಾ ಹಿರಿತನ ಸಂರಕ್ಷಣಾ ಮಸೂದೆ ಮಂಡಿಸಿ, ಅಂಗೀಕರಿಸುವ ಮೂಲಕ ರಾಜ್ಯ ಸರಕಾರ ಭಡ್ತಿ ಮೀಸಲಾತಿ ಸಂರಕ್ಷಣೆಗೆ ದಿಟ್ಟ ಕ್ರಮ ಕೈಗೊಂಡಿದೆ. ಈ ಮಸೂದೆಯಿಂದ ಸಾಮಾನ್ಯ ನೌಕರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಮಿತಿ ಸಂಘಟನಾ ಸಂಚಾಲಕ ಸಿದ್ಧಲಿಂಗಯ್ಯ ಸ್ಪಷ್ಟಪಡಿಸಿದ್ದಾರೆ.
ಪರಿಶಿಷ್ಟರ ಭಡ್ತಿ ಮೀಸಲಾತಿ ಸಂರಕ್ಷಣಾ ಮಸೂದೆಗೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಬೇಕು. ಆ ಮೂಲಕ ಹಿಂಭಡ್ತಿ ಆತಂಕಕ್ಕೆ ಸಿಲುಕಿರುವ 4 ಸಾವಿರ ಮಂದಿ ಪರಿಶಿಷ್ಟ ಅಧಿಕಾರಕ ಮತ್ತು ನೌಕರರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Next Story





