ನಟ ವಿಶಾಲ್, ಜಯಲಲಿತಾ ಸಂಬಂಧಿ ದೀಪಾ ನಾಮಪತ್ರ ತಿರಸ್ಕೃತ
ಆರ್.ಕೆ. ನಗರ ಉಪಚುನಾವಣೆ

ಚೆನ್ನೈ, ಡಿ.5: ಆರ್.ಕೆ. ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಮಿಳು ನಟ ವಿಶಾಲ್ ಹಾಗು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ ಸಂಬಂಧಿ ದೀಪಾ ಜಯಕುಮಾರ್ ಸಲ್ಲಿಸದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ರಿಟರ್ನಿಂಗ್ ಅಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಶಾಲ್ ಹಾಗು ಅವರ ಬೆಂಬಲಿಗರು ಆರ್ ಕೆ ನಗರದ ತಿರುವೊಟ್ಟಿಯೂರ್ ನಲ್ಲಿ ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನನಿರತರನ್ನು ತೆರವುಗೊಳಿಸಿದರು.
ದೀಪಾ ಸಲ್ಲಿಸಿದ್ದ ಅಫಿದಾವಿತ್ ನಲ್ಲಿ ಸೂಕ್ತ ಮಾಹಿತಿಗಳಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ ಸಲ್ಲಿಸಲಾಗಿದ್ದ ಎಲ್ಲಾ ನಾಮಪತ್ರಗಳನ್ನು ಚುನಾವಣಾ ಆಯೋಗ ಪರಿಶೀಲಿಸಿತ್ತು. 54 ನಾಮಪತ್ರಗಳಲ್ಲಿ ಸರಿಯಾದ ಮಾಹಿತಿ ಇಲ್ಲದೆ ಇದ್ದುದರಿಂದ ತಿರಸ್ಕರಿಸಲಾಗಿದೆ.
Next Story





