ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ವೀರಪ್ಪ ಮೊಯ್ಲಿ ಕರೆ
ಹೆಬ್ರಿಯಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಹೆಬ್ರಿ, ಡಿ.5: ಹೆಬ್ರಿ ಮೇಲ್ಪೇಟೆಯಲ್ಲಿರುವ ಕುಬೇರಾ ಕಟ್ಟಡದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಸೋಮವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಸಂಸದ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷ ಗ್ರಾಮ ಹಂತದಲ್ಲಿ ಇನ್ನಷ್ಟು ಬಲವರ್ಧನೆಗೊಂಡು ಕಾರ್ಕಳ ತಾಲೂಕಿನಲ್ಲಿ ಮತ್ತೆ ಕಾಂಗ್ರೆಸ್ ವೈಭವ ಮೆರೆಯುವಂತಾಗಲಿ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ವಿಶಾಲವಾದ ಕಛೇರಿ, ಸಭಾಂಗಣ, ವಾಹನ ನಿಲುಗಡೆ ಜಾಗ ಸಹಿತ ಹಲವು ವ್ಯವಸ್ಥೆಯನ್ನು ಕಚೇರಿ ಕಟ್ಟಡ ಹೊಂದಿರುವುದಕ್ಕೆ ವೀರಪ್ಪಮೊಯ್ಲಿ ಸಂತಸ ವ್ಯಕ್ತಪಡಿಸಿದರು.
ಮತದಾರರು ಮತ್ತು ಜನತೆ, ಸಾರ್ವಜನಿಕ ಅಲ್ಲದೇ ಸರಕಾರಿ ಸೇವೆಗಳ ಮಾಹಿತಿ ಹಾಗೂ ಸಲಹೆಗಳಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಪಕ್ಷದ ನಾಯಕರು ಮನವಿ ಮಾಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಜಿ.ಎ.ಬಾವ, ಹರ್ಷ ಮೊಯ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಕಟ್ಟಡದ ಮಾಲಕ ಕಾಂಗ್ರೆಸ್ ಹಿರಿಯ ಮುಖಂಡ ಎಚ್. ಪ್ರವೀಣ್ ಬಲ್ಲಾಳ್, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರಾದ ಕೊಳ್ಕೆಬೈಲ್ ಕಿಶನ್ ಹೆಗ್ಡೆ, ಎಚ್.ಪ್ರಸಾದ ಬಲ್ಲಾಳ್, ಸೀತಾನದಿ ರಮೇಶ ಹೆಗ್ಡೆ, ನವೀನ ಕೆ. ಅಡ್ಯಂತಾಯ, ಎಚ್.ಶೀನಪೂಜಾರಿ, ಮಂಜುನಾಥ ಪೂಜಾರಿ, ವಾದಿರಾಜ ಶೆಟ್ಟಿ, ಎಚ್.ರಾಜೇಶ್ ಭಂಡಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ವಿವಿಧ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.







