ಬಾಬಾ ಬುಡನ್‌ಗಿರಿಯಲ್ಲಿ ದಾಂಧಲೆಗೆ ಖಂಡನೆ
ಮಂಗಳೂರು, ಡಿ.5: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ನಡೆಸಿದ ದಾಂಧಲೆ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಖಂಡಿಸಿದ್ದಾರೆ.
ಮತೀಯ ಸಾಮರಸ್ಯದ ಕೇಂದ್ರವಾದ ಬಾಬಾ ಬುಡನ್‌ಗಿರಿಯ ಆವರಣ ಬೇಲಿಯನ್ನು ಉಲ್ಲಂಘಿಸಿ ಅಕ್ರಮ ಪ್ರವೇಶಗೈದ ದುಷ್ಕರ್ಮಿಗಳು ಧ್ವಜ ನೆಟ್ಟಿರುವುದು ಖಂಡನೀಯ. ರಾಜ್ಯ ಸರಕಾರ ದುಷ್ಕರ್ಮಿಗಳನ್ನು ಹದ್ದುಬಸ್ತಿನಲ್ಲಿಡಲು ಮುಂದಾಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
Next Story





