ಮಹಿಳೆಯನ್ನು ಕಟ್ಟಿ ಹಾಕಿ ಹಣ, ಒಡವೆ ದೋಚಿದ ಕಳ್ಳರ ಬಂಧನ

ತುಮಕೂರು. ಡಿ. 5: ಮಹಿಳೆಯೊಬ್ಬರೇ ಮನೆಯಲ್ಲಿರುವಾಗ ಬಾಗಿಲು ತೆಗೆಸಿ, ಅವರಿಗೆ ಮಾರಕಾಸ್ತ್ರ ತೋರಿಸಿ, ಮನೆಯಲ್ಲಿದ್ದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಹುಳಿಯಾರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹುಳಿಯಾರು ಗ್ರಾಮದ ವಾಸಿಗಳಾದ ಹರೀಶ್ ಬಿನ್ ಮಂಜಾನಾಯ್ಕ್ ಮತ್ತು ನರಸಿಂಹಮೂರ್ತಿ ಬಿನ್. ರಂಗನಾಥ್ ಎಂದು ಗುರುತಿಸಲಾಗಿದೆ.ಇವರುಗಳು ಡಿಸೆಂಬರ್ 1ರ ರಾತ್ರಿ ಹುಳಿಯಾರು ಗ್ರಾಮದ ಆರ್.ಜಿ.ಸರ್ಕಲ್‍ಬಳಿ ಇರುವ ಫಾತಿಮಾಬಿ ಕೋಂ ಅಹಮದ್ ಅವರ ಮನೆಯಲ್ಲಿ ಫಾತಿಮಾಬಿ ಒಬ್ಬರೆ ಇರುವಾಗ ಮನೆಯ ಬಾಗಿಲು ತೆಗಿಸಿ, ಅವರನ್ನು ಕಟ್ಟಿ ಹಾಕಿ ಚಾಕು ತೋರಿಸಿ, 200 ಗ್ರಾಂ ಚಿನ್ನಾಭರಣ, 70 ಗ್ರಾಂ ಬೆಳ್ಳಿ,24 ಸಾವಿರ ರೂ ನಗದು, ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಹುಳಿಯಾರು ಠಾಣೆಯಲ್ಲಿ ದಾಖಲಾದ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಮಾರಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದು, ತಂಡಕ್ಕೆ ದೊರತೆ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹೆಚ್ಚಿದ್ದು,ಬಂಧಿತರಿಂದ ಈ ಹಿಂದೆ ಬೆಂಗಳೂರು ಮತ್ತು ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ದೊಚ್ಚಿದ್ದ ಸುಮಾರು 5 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.







