ರೊಹಿಂಗ್ಯಾ ದಮನ ಕಾರ್ಯಾಚರಣೆಯಲ್ಲಿ ‘ಜನಾಂಗೀಯ ಹತ್ಯೆ’ಯ ಸಂಚು: ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥ

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಡಿ. 5: ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ‘ಜನಾಂಗೀಯ ಹತ್ಯೆ’ಯ ಸಂಚು ಅಡಗಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಮಂಗಳವಾರ ಎಚ್ಚರಿಸಿದ್ದಾರೆ.
ಸೇನಾ ಕಾರ್ಯಾಚರಣೆಗೆ ಬೆದರಿ ಬೌದ್ಧ ಬಾಹುಳ್ಯದ ಮ್ಯಾನ್ಮಾರ್‌ನಿಂದ ಮೂರು ತಿಂಗಳ ಅವಧಿಯಲ್ಲಿ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
‘‘ರೊಹಿಂಗ್ಯಾ ಮುಸ್ಲಿಮರನ್ನು ಮನಬಂದಂತೆ ಗುಂಡು ಹಾರಿಸಿ, ಗ್ರೆನೇಡ್‌ಗಳನ್ನು ಉಡಾಯಿಸಿ, ಹತ್ತಿರದಲ್ಲಿ ಗುಂಡುಗಳನ್ನು ಹಾರಿಸಿ, ಇರಿದು ಮತ್ತು ಹೊಡೆದು ಕೊಲ್ಲಲಾಗಿದೆ. ಜನರು ಒಳಗಿರುವಂತೆಯೇ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ’’ ಎಂಬುದಾಗಿ ಝೈದ್ ರಅದ್ ಅಲ್ ಹುಸೇನ್ ತನ್ನ ವರದಿಯಲ್ಲಿ ಹೇಳಿದ್ದಾರೆ.
‘‘ಇದೆಲ್ಲವನ್ನು ನೋಡುವಾಗ, ಇಲ್ಲಿ ಜನಾಂಗೀಯ ಹತ್ಯೆ ಇರಲಿಲ್ಲವೆಂದು ಯಾರಾದರೂ ಹೇಳಲು ಸಾಧ್ಯವೇ?’’ ಎಂದು ಅವರು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯನ್ನು ಅವರು ಪ್ರಶ್ನಿಸಿದ್ದಾರೆ.
Next Story





